ಮಹಿಳೆ ಮೇಲೆ ಹಲ್ಲೆ ಆರೋಪ : ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ವಿರುದ್ಧ ದೂರು ದಾಖಲು

ಎಚ್.ಎಂ.ರೇವಣ್ಣ
ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಹಲ್ಲೆ ಆರೋಪ ಸಂಬಂಧ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಮವಾರ (ಮಾ17) ಎಚ್.ಎಂ.ರೇವಣ್ಣ ಅವರು ಕುಮಾರಕೃಪಾ ಅತಿಥಿಗೃಹದಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜ್ ಆರೋಪಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು, ಸಾಕ್ಷ್ಯಧಾರಗಳನ್ನು ಓದಗಿಸುವಂತೆ ನಂದಿನಿ ಅವರಿಗೆ ನೋಟಿಸ್ ನೀಡಿದ್ದಾರೆ.
ಹಲ್ಲೆ ಮಾಡಿದ್ದು ಸುಳ್ಳು: ‘ಆ ಮಹಿಳೆ ಯಾರೂ ಅನ್ನೋದೆ ನನಗೆ ಗೊತ್ತಿಲ್ಲ. ಅಲ್ಲಿಗೆ ಬಂದು ನನಗೆ ಕಿರಿಕಿರಿ ಮಾಡಿದ್ದಲ್ಲದೆ ಗಲಾಟೆ ಮಾಡುತ್ತಿದ್ದರು, ರಾಹುಲ್ ಗಾಂಧಿ ಎಂದು ಕಿರುಚುತ್ತಿದ್ದರು. ಆಕೆ ಮೊಬೈಲ್‍ಫೋನ್‍ನಲ್ಲಿ ವಿಡಿಯೊ ಮಾಡಲು ಮುಂದಾದಾಗ ನಾನು ವಿಡಿಯೋ ಮಾಡೋದು ಬೇಡ ಎಂದು ಮೊಬೈಲ್ ಅನ್ನು ತಳ್ಳಿದ್ದು ನಿಜ. ಆದರೆ, ಹಲ್ಲೆ ಯತ್ನ, ಹೊಡೆದಿದ್ದು ಎಂದು ಹೇಳಿರುವುದು ಸರಿಯಲ್ಲ’
-ಎಚ್.ಎಂ.ರೇವಣ್ಣ, ಅಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ