ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ...

Update: 2024-02-27 02:48 GMT

ಬೆಂಗಳೂರು: ವಿಧಾನಸೌಧದ ಮೊದಲ ಮಹಡಿಯಲ್ಲಿ ಕೊಠಡಿ ಸಂಖ್ಯೆ 106 ರಲ್ಲಿ ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಕಾರ್ಯವು ಸಂಜೆ 5 ಗಂಟೆಗೆ ನಡೆಯಲಿದೆ.

ರಾಜ್ಯಸಭಾ ಚುನಾವಣೆಗಾಗಿ ಉತ್ತರಪ್ರದೇಶದ 10, ಹಿಮಾಚಲಪ್ರದೇಶದ 1 ಹಾಗೂ ಕರ್ನಾಟಕದ 4 ಸ್ಥಾನಗಳಿಗೆ ಇಂದು (ಮಂಗಳವಾರ) ಮತದಾನ ನಡೆಯಲಿದೆ.

12 ರಾಜ್ಯಗಳ 41 ಅಭ್ಯರ್ಥಿಗಳು ರಾಜ್ಯಸಭೆ ಸದಸ್ಯರಾಗಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News