ಹನಿಟ್ರ್ಯಾಪ್ ಬಗ್ಗೆ ಚರ್ಚೆ ನಾಚಿಕೆಗೇಡು: ಸಚಿವ ಸಂತೋಷ್ ಲಾಡ್

Update: 2025-03-23 18:38 IST
ಹನಿಟ್ರ್ಯಾಪ್ ಬಗ್ಗೆ ಚರ್ಚೆ ನಾಚಿಕೆಗೇಡು: ಸಚಿವ ಸಂತೋಷ್ ಲಾಡ್

ಸಚಿವ ಸಂತೋಷ್ ಲಾಡ್ 

  • whatsapp icon

ಹುಬ್ಬಳ್ಳಿ: ರಾಜ್ಯದಲ್ಲಿ ‘ಹನಿಟ್ರ್ಯಾಪ್’ ಬಗ್ಗೆ ಚರ್ಚೆ ಆಗುತ್ತಿರುವುದನ್ನು ನೋಡಿದರೆ ನಮ್ಮ ಸಮಾಜ ಅವನತಿಗೆ ಹೋಗುತ್ತಿರುವ ಸೂಚನೆ. ಬೇರೆ ದೇಶಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ, ನಾವು ಬರೀ ಹನಿಟ್ರ್ಯಾಪ್ ಬಗ್ಗೆ ಮಾತನಾಡುತ್ತಿರುವುದು ನಾಚಿಕೇಡು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬೇಸರ ವ್ಯಕ್ತಪಡಿಸಿದರು.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಚರ್ಚೆ ಮಾಡಬೇಕು ಎಂದು ಸ್ಪೀಕರ್ ಪೀಠಕ್ಕೆ ನುಗ್ಗಿ ಗದ್ದಲ ಮಾಡಿದ್ದರಿಂದ 18 ಮಂದಿ ಶಾಸಕರು ಆರು ತಿಂಗಳು ಅಮಾನತು ಆಗಿದ್ದಾರೆ. ನಮ್ಮ ಸರಕಾರ ಹನಿಟ್ರ್ಯಾಪ್ ಬಗ್ಗೆ ಸ್ಪಷ್ಟನೆ ನೀಡಿತ್ತು. ಉನ್ನತ ಮಟ್ಟದ ತನಿಖೆ ಮಾಡಲಾಗುವುದು ಎಂದು ಸಿಎಂ ಹಾಗೂ ಗೃಹ ಸಚಿವರು ಹೇಳಿದ್ದರು. ಆದರೂ ಗಲಾಟೆ ಮಾಡಿದರು ಎಂದು ದೂರಿದರು.

ಸ್ಪೀಕರ್ ಮೇಲೆ ಕಾಗದ ಪತ್ರಗಳನ್ನು ಹರಿದು ಎಸೆಯುವ ಅವಶ್ಯಕತೆ ಏನಿತ್ತು. ಹನಿಟ್ರ್ಯಾಪ್ ಬಗ್ಗೆ ಅವಸರ ಏನಿದೆ, ಈ ನಾಟಕ ಏನು?. ಹನಿಟ್ರ್ಯಾಪ್‍ಗಿಂತ ಚರ್ಚೆ ಮಾಡುವ ಹಲವು ವಿಷಯಗಳಿದ್ದವು. ರೈತರ ಸಮಸ್ಯೆ ಇದ್ದವು. ಕುಡಿಯುವ ನೀರಿನ ವಿಷಯದ ಬಗ್ಗೆ ಮಾತನಾಡಬೇಕಿತ್ತು. ಸಿಎಂ ಉತ್ತರ ನೀಡಿದ ಮೇಲೂ ಹನಿಟ್ರ್ಯಾಪ್ ವಿಷಯವನ್ನೇ ಮುಖ್ಯವಾಗಿ ತೆಗೆಯಬೇಕಾದ ತುರ್ತು ಏನಿತ್ತು ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯವರಿಗೆ ಪ್ರಚಾರ ಗಿಟ್ಟಿಸಿಕೊಳ್ಳಬೇಕು, ಮಾಧ್ಯಮಗಳಲ್ಲಿ ಬರಬೇಕು ಎಂಬ ಉದ್ದೇಶವಿದೆ. ಅವರ ಸಾಧನೆ ಏನಿದೆ. ನ್ಯಾಯ ಕಲಾಪದಲ್ಲಿ ಸಿಗುತ್ತಾ. ಬಿಜೆಪಿಯವರ ಈ ವರ್ತನೆ ನಾಚಿಕೆಗೇಡು. ಇದರ ಬಗ್ಗೆ ವಿಷಾದವಿದೆ. ಹನಿಟ್ರ್ಯಾಪ್ ಅನ್ನೇ ತೆಗೆದುಕೊಂಡು ಸಾರ್ವಜನಿಕರಿಗೆ ಏನೋ ಪ್ರಯೋಜನ ಆಗಿದೆ ಅನ್ನೋ ರೀತಿ ಬಿಜೆಪಿಯವರು ಬಿಂಬಿಸಿದರು ಎಂದು ಟೀಕಿಸಿದರು.

ಕೇಂದ್ರ ಸರಕಾರ ಯಾವ ಮಾನದಂಡಗಳನ್ನು ಪರಿಗಣಿಸಿ ಕ್ಷೇತ್ರ ಮರುಹಂಚಿಕೆ ಮಾಡುತ್ತಿದೆ ಎಂಬ ಆತಂಕ ನಮಗಿದೆ. ಪಕ್ಷಾತೀತವಾಗಿ ಎಲ್ಲರಿಗೂ ಈ ಆತಂಕ ಇದೆ. ಪ್ರತಿನಿಧಿಸುವ ಅವಕಾಶ ಕಡಿಮೆಯಾದರೆ ನಮಗೆ ತೊಂದರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ನಾವೆಲ್ಲ ಈ ಬಗ್ಗೆ ಪ್ರಶ್ನಿಸಬೇಕು ಎಂದು ಸಂತೋಷ್ ಲಾಡ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News