HSRP ನಂಬರ್​ ಪ್ಲೇಟ್​​ ಅಳವಡಿಸುವ ಅವಧಿ ವಿಸ್ತರಣೆ

Update: 2024-06-19 17:00 GMT

ಬೆಂಗಳೂರು : 2019ರ ಎಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ(HSRP) ಅಳವಡಿಕೆ ಗಡುವನ್ನು ರಾಜ್ಯ ಸರಕಾರ ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಿದೆ.

ಈ ಹಿಂದೆ ರಾಜ್ಯ ಸರಕಾರ ಹಲವು ಗಡುವುಗಳನ್ನು ನೀಡಿದ್ದರೂ ಸಹ ಬಹುತೇಕ ವಾಹನ ಮಾಲೀಕರು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಲ್ಲ. ಆದ್ದರಿಂದ ಗಡುವನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಿಸಲಾಗಿದೆ ಪ್ರಕಟನೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, "ಸೆಪ್ಟೆಂಬರ್15 ವರಿಗೆ HSRP ನಂಬರ್ ಪ್ಲೇಟ್ ಆಳವಡಿಕೆಗೆ ಡೆಡ್​ಲೈನ್ ನೀಡಲಾಗಿದೆ. ಸೆಪ್ಟೆಂಬರ್ 15 ಬಳಿಕ ಅವಧಿ ವಿಸ್ತರಣೆ ಇಲ್ಲ. ಈಗಾಗಲೇ ಹಲವು ಬಾರಿ HSRP ನಂಬರ್ ಪ್ಲೇಟ್ ಆಳವಡಿಕೆ ಗಡುವು ವಿಸ್ತರಣೆ ಮಾಡಿದ್ದೇವೆ" ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News