ಹುಸಿ ಬಾಂಬ್ ಕರೆ ಪ್ರಕರಣ: ಶಾಲಾ ಆವರಣವನ್ನು ಅನ್ಯ ಉದ್ದೇಶಗಳಿಗೆ ನೀಡದಂತೆ ಶಿಕ್ಷಣ ಇಲಾಖೆ ಆದೇಶ

Update: 2023-12-14 13:34 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ 68 ಶಾಲೆಗಳಿಗೆ ನಕಲಿ ಬಾಂಬ್ ಇಮೇಲ್ ಬಂದ ನಂತರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳ ಪಠ್ಯೇತರ ಉದ್ದೇಶಗಳಿಗೆ ಹೊರತುಪಡಿಸಿ ಬೇರೆ ಅನ್ಯ ಉದ್ದೇಶಗಳಿಗೆ ತಮ್ಮ ಕ್ಯಾಂಪಸ್‍ಗಳಲ್ಲಿ ಅವಕಾಶ ನೀಡದಂತೆ ಆದೇಶ ಹೊರಡಿಸಿದೆ.

ಪಠ್ಯೇತರ ಚಟುವಟಿಕೆಗಳಿಗೆ ಶಾಲೆಗಳು ಸರಕಾರದಿಂದ ಅನುಮತಿ ಪಡೆಯಬೇಕು. ಪ್ರಾಂಶುಪಾಲರು ತಮ್ಮ ಶಾಲೆಗಳ ಆವರಣದಲ್ಲಿ ಯಾರಾದರೂ ಓಡಾಡುವುದು ಕಂಡುಬಂದರೆ ಅಥವಾ ಅವರಿಗೆ ಬೆದರಿಕೆ ಇಮೇಲ್‍ಗಳು ಬಂದರೆ ಪೊಲೀಸ್ ಮತ್ತು ಡಿಎಸ್‍ಇಎಲ್ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಾಥಮಿಕ ಶಿಕ್ಷಣ ಆಯುಕ್ತೆ ಬಿ.ಬಿ.ಕಾವೇರಿ ಮಾತನಾಡಿ, ಹುಸಿ ಬಾಂಬ್ ಇಮೇಲ್ ಬೆದರಿಕೆಯ ನಂತರ ನಾವು ಆದೇಶವನ್ನು ಹೊರಡಿಸಿದ್ದೇವೆ, ಮಕ್ಕಳನ್ನು ಬೇರೆ ಯಾವುದೇ ಚಟುವಟಿಕೆಗೆ ಬಳಸಬಾರದು ಎಂದು ಶಾಲೆಗಳಿಗೆ ನಿರ್ದೇಶನ ನೀಡಿದ್ದೇವೆ. ಶಾಲಾ ಆವರಣದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಶೈಕ್ಷಣಿಕ ಕಾನೂನು, ನೀತಿಗೆ ಸಂಬಂಧಿಸಿದಂತೆ 2016ರಲ್ಲಿ ಆದೇಶವನ್ನು ಜಾರಿಗೊಳಿಸಲಾಗಿದೆ. ಆದರೆ, ಶಾಲೆಗಳು ಅಥವಾ ಸರಕಾರವು ಯಾವುದೇ ಪ್ರಗತಿಯನ್ನು ಮಾಡಿಲ್ಲ. ಸರಕಾರ ಕೇವಲ ಸಲಹೆ ಸೂಚನೆ ನೀಡಿ ಅದನ್ನು ಬಿಟ್ಟಿರುವುದು ತಜ್ಞರಿಗೆ ಸಂತಸ ತಂದಿಲ್ಲ. ಸಮಸ್ಯೆಗಳನ್ನು ನಿರ್ವಹಿಸಲು ಸಲಹೆಗಾರರ ಅಗತ್ಯವಿದೆ. ನಮಗೆ, ಶಾಲಾ ಮಕ್ಕಳಿಗೆ ಉತ್ತಮ ರಕ್ಷಣೆ ಬೇಕು ಎಂದು ಬಿ.ಬಿ.ಕಾವೇರಿ ತಿಳಿಸಿದರು.

ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್‍ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ. ಮಾತನಾಡಿ, ಯಾರಾದರೂ ಶಾಲೆಯ ಆಸ್ತಿಯನ್ನು ಅತಿಕ್ರಮಿಸಿ ದುರುಪಯೋಗಪಡಿಸುವ ಸಾಧ್ಯತೆಯಿದೆ. ಸಾರ್ವಜನಿಕ ಶಾಲೆಗಳು ದುರ್ಬಲವಾಗಿವೆ. ಖಾಸಗಿ ಶಾಲೆಗಳಂತೆ ಯಾವುದೇ ಭದ್ರತೆ ಮತ್ತು ಹೆಚ್ಚುವರಿ ಸಿಬ್ಬಂದಿ ಇಲ್ಲದ ಕಾರಣ ಅಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತವೆ. ನಾವು ಅನೇಕ ನಿದರ್ಶನಗಳನ್ನು ಕೇಳುತ್ತೇವೆ. ಇದಕ್ಕೆಲ್ಲಾ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News