ಕನ್ನಡದ ಸಹೋದರ ಭಾಷೆಗಳ ಸಬಲೀಕರಣಕ್ಕೆ ಸಶಕ್ತ ಭಾಷಾ ನೀತಿ ನಿರೂಪಣೆಗೆ ಸರಕಾರದ ಆದೇಶ ಸ್ವಾಗತಾರ್ಹ: ಡಾ. ಬಿಳಿಮಲೆ

Update: 2024-10-21 18:03 GMT

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿರುವ ಕೊರಗ, ಕೊಡವ, ಬಡಗ, ಸಿದ್ಧಿ, ಕುರುಬ ಮೊದಲಾದ ಸಣ್ಣ ಸಣ್ಣ ಭಾಷೆಗಳನ್ನು ಸಂರಕ್ಷಿಸಿಕೊಳ್ಳಲು ಕರ್ನಾಟಕಕ್ಕೊಂದು ಸಶಕ್ತವಾದ ಭಾಷಾ ನೀತಿ ರಚನೆಗೆ ಸರಕಾರ ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದ್ದಾರೆ.

ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡದೊಂದಿಗೆ ಕರ್ನಾಟಕದಲ್ಲಿ ಉರ್ದು ಭಾಷೆಯೂ ಸೇರಿದಂತೆ ಅನೇಕ ಉಪ ಭಾಷೆಗಳು ಬೆಳೆದಿವೆ. ಈ ಉಪ ಭಾಷೆಗಳು ಕನ್ನಡವನ್ನು ಹೆಚ್ಚು ಶ್ರೀಮಂತಗೊಳಿಸುವುದರ ಜೊತೆಗೆ ಅದರ ಪ್ರಾದೇಶಿಕ ವೈವಿಧ್ಯತೆಗೂ, ಅದರ ಅನನ್ಯ ಗುಣಕ್ಕೂ ಕಾರಣವಾಗಿವೆ ಎಂದು ತಿಳಿಸಿದ್ದಾರೆ.

ಕರ್ನಾಟಕವು ಭಾಷಾ ದೃಷ್ಠಿಯಿಂದ ಸಮೃದ್ಧವಾಗಿದ್ದರೂ ಯುನೆಸ್ಕೊ ಹೇಳಿರುವಂತೆ ಕರ್ನಾಟಕದ ಸಂಸ್ಕೃತಿಯ ಭಾಗವಾದ 72 ಭಾಷೆಗಳು ಪತನಮುಖಿಯಾಗುತ್ತಿದ್ದು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡದ ಸಮೃದ್ಧಿಗಾಗಿ ಸಹಕರಿಸಿದ ಭಾಷೆಗಳನ್ನು ಉಳಿಸುವ ಮೂಲಕ ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಯೋಜನೆಯನ್ನು ರೂಪಿಸಿದೆ. ಕನ್ನಡವನ್ನು ಬೆಳೆಸಿದ ಇತರ ಸಣ್ಣ ಭಾಷೆಗಳನ್ನು ಸಂರಕ್ಷಿಸಿಕೊಳ್ಳಲು ಇಡೀ ದೇಶಕ್ಕೆ ಮಾದರಿಯಾಗಲಿರುವ ಭಾಷಾ ನೀತಿಯನ್ನು ರೂಪಿಸಲು ಮುಂದಾಗಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News