ಅಕ್ರಮ ಚಿನ್ನ ಸಾಗಾಟ ಪ್ರಕರಣ: ರನ್ಯಾ ರಾವ್ ಪತಿ ಜಿತಿನ್ ಹುಕ್ಕೇರಿಗೆ ಹೈಕೋರ್ಟ್ ರಿಲೀಫ್
Update: 2025-03-11 20:52 IST

ರನ್ಯಾ ರಾವ್ (Photo: X)
ಬೆಂಗಳೂರು: ಡಿಆರ್ ಐ ಅಧಿಕಾರಿಗಳಿಂದ ರನ್ಯಾ ರಾವ್ ಬಂಧನ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ಹೈಕೋರ್ಟ್ ಮೆಟ್ಟಿಲೇರಿದ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿಗೆ ಹೈಕೋರ್ಟ್ ರಿಲೀಫ್ ನೀಡಿದೆ.
ಜತಿನ್ ಹುಕ್ಕೇರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ ಆದೇಶಿದೆ.
ವಿಚಾರಣೆ ವೇಳೆ ಜತಿನ್ ಹುಕ್ಕೇರಿ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದಿಸಿ, ಪತ್ನಿಯ ಮೇಲಿನ ಆರೋಪಕ್ಕೂ ಜತಿನ್ ಗೂ ಸಂಬಂಧವಿಲ್ಲ. ಡಿಆರ್ ಐ ಅಧಿಕಾರಿಗಳು ಸಮನ್ಸ್ ನೀಡಿದಾಗ ತನಿಖೆಗೆ ಸಹಕರಿಸಿದ್ದಾರೆ. ಎರಡನೇ ಬಾರಿಯೂ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸದೇ ಬಂಧಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ವಾದ ಆಲಿಸಿದ ಪೀಠ, ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ ಹೈಕೋರ್ಟ್ ಆದೇಶಿಸುವ ಮೂಲಕ ರನ್ಯಾ ರಾವ್ ಪತಿಗೆ ರಿಲೀಫ್ ನೀಡಿದೆ.