ಕನಕಪುರ | ಅತ್ತೆಯ ಕೊಲೆ ಪ್ರಕರಣ; ಅಳಿಯನಿಗೆ ಜೀವಾವಧಿ ಶಿಕ್ಷೆ, 75 ಸಾವಿರ ರೂ.ದಂಡ ವಿಧಿಸಿದ ಕೋರ್ಟ್
ಕನಕಪುರ, ಆ.9: ಹಣದ ಆಸೆಗೆ ಅತ್ತೆಯನ್ನು ಹತ್ಯೆಗೈದಿದ್ದ ಆರೋಪದಡಿ ಅಳಿಯನಿಗೆ ಕನಕಪುರ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 75 ಸಾವಿರ ರೂ. ದಂಡ ವಿಧಿಸಿದೆ.
ಘಟನೆ ವಿವರ:
ಕನಕಪುರ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿದೊಡ್ಡಿ ಗ್ರಾಮದಲ್ಲಿ 2021ರಲ್ಲಿ ಆರೋಪಿ ಭೀಮಾನಾಯ್ಕ(40) ಎಂಬಾತ ತನ್ನ ಅತ್ತೆ ಲಕ್ಷ್ಮೀಬಾಯಿ(52) ಎಂಬವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಮೃತರ ಮಗಳು ಶಶಿಕಲಾ ಎಂಬಾಕೆಯನ್ನು 9 ವರ್ಷಗಳ ಹಿಂದೆ ಆರೋಪಿ ವಿವಾಹವಾಗಿದ್ದ, ಇವರಿಗೆ ನಿಖಿಲ್ ಮತ್ತು ರು ಎಂಬ ಮಕ್ಕಳಿದ್ದರು. ಆರೋಪಿ ಭೀಮಾನಾಯ್ಕ ತನ್ನ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಪ್ರತಿ ದಿನ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
2021 ಮಾರ್ಚ್ 26 ರಂದು ಆರೋಪಿ ಪತ್ನಿ ಜೊತೆ ಗಲಾಟೆ ಮಾಡಿದ್ದಲ್ಲದೇ ಆಸ್ತಿ ಮಾರಾಟ ಮಾಡುವಂತೆ ಅತ್ತೆ ಲಕ್ಷ್ಮೀಬಾಯಿಗೂ ಬೆದರಿಸಿ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಅಂದಿನ ಸರ್ಕಲ್ ಇನ್‌ಸ್ಪೆಕ್ಟ ಟಿ.ಟಿ.ಕೃಷ್ಣಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದೋಷರೋಪ ಪಟ್ಟಿ ಸಲ್ಲಿಸಿದ್ದರು.
ಕನಕಪುರ ತಾಲೂಕಿನ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕರಣದ ವಾದ ಮತ್ತು ಪ್ರತಿವಾದನವನ್ನು ಆಲಿಸಿ ಆರೋಪಿ ಕೊಲೆ ಕೃತ್ಯದಲ್ಲಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಧೀಶ ಎಚ್.ಎನ್.ಕುಮಾರ್ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 75 ಸಾವಿರ ರೂ.ದಂಡ ವಿಧಿಸಿದ್ದಾರೆ. ಒಂದ ವೇಳೆ ಹೆಚ್ಚುವ ದಂಡವನ್ನು ಕಟ್ಟದೇ ಹೋದಲ್ಲಿ ಮತ್ತೆ 6 ತಿಂಗಳು ಜೈಲು ಶಿಕ್ಷೆಯನ್ನು ಮುಂದುವರಿಸುವಂತೆಯೂ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.