ಆಸ್ಟ್ರೇಲಿಯಾಗೆ ತೆರಳಿದ ಕರ್ನಾಟಕದ ಸಚಿವರ ನಿಯೋಗದಿಂದ ಪ್ರಧಾನಿ ಆಂಥೋನಿ ಅಲ್ಬನೀಸ್ ಭೇಟಿ

ಮೆಲ್ಬೋರ್ನ್ : ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಮತ್ತು ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಫರೀದ್ ನೇತೃತ್ವದ ಕರ್ನಾಟಕದ ನಿಯೋಗವು ಅಧಿಕೃತ ಭೇಟಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದೆ.
ಮೆಲ್ಬೋರ್ನ್ ಗೆ ಬಂದಿಳಿದ ಕೂಡಲೇ, ನಿಯೋಗವು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆಯನ್ನು ನಡೆಸಿದ್ದಾರೆ.
ಮೆಲ್ಬೋರ್ನ್ ಮತ್ತು ಸಿಡ್ನಿಗೆ ಭೇಟಿ ನೀಡುತ್ತಿರುವ ಕರ್ನಾಟಕದ ಸಚಿವರ ನಿಯೋಗವು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಸಂಬಂಧಿತ ಆರೋಗ್ಯ ಕ್ಷೇತ್ರಗಳಲ್ಲಿ ಸಹಯೋಗವನ್ನು ಸಾಧಿಸುವ ದೃಷ್ಟಿಯಿಂದ ಮಹತ್ವದ ಮಾತುಕತೆ ನಿರೀಕ್ಷಿಸಲಾಗಿದೆ.
ನಿಯೋಗವು ಫೆಬ್ರವರಿ 2ರಂದು ಸಿಡ್ನಿಗೆ ತೆರಳಲಿದ್ದು, ಕಾನ್ಸುಲ್ ಜನರಲ್ ಕಚೇರಿ ಮತ್ತು ಸಿಡ್ನಿಯಲ್ಲಿ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲಿದ್ದಾರೆ. ಸರಕಾರದ ಪ್ರತಿನಿಧಿಗಳ ಜೊತೆ ಮಹತ್ವದ ಮಾತುಕತೆಯನ್ನು ನಡೆಸಲಿದ್ದಾರೆ. ನಿಯೋಗವು ಫೆಬ್ರವರಿ 6ರಂದು ಭಾರತಕ್ಕೆ ಮರಳಲಿದೆ.