ನ್ಯಾ.ನಾಗಮೋಹನದಾಸ್ ವರದಿಯ ಎಲ್ಲ ಶಿಫಾರಸು ಅನುಷ್ಠಾನ : ಆರ್.ಬಿ.ತಿಮ್ಮಾಪುರ
Update: 2025-03-27 18:34 IST

ಆರ್.ಬಿ.ತಿಮ್ಮಾಪುರ
ಬೆಂಗಳೂರು : ಒಳಮೀಸಲಾತಿ ಜಾರಿ ಬಗೆಗೆ ನಮ್ಮ ಸರಕಾರಕ್ಕೆ ಬದ್ಧತೆಯಿದೆ. ನಾವು ಒಳಮೀಸಲಾತಿ ಜಾರಿ ಮಾಡುತ್ತೇವೆ. ವೈಜ್ಞಾನಿಕವಾಗಿ ಅಂಕಿ-ಅಂಶಗಳು ಬೇಕು. ಆ ನಿಟ್ಟಿನಲ್ಲಿ ಆಯೋಗ ರಚನೆ ಮಾಡಲಾಗಿತ್ತು. ನ್ಯಾ.ನಾಗಮೋಹನದಾಸ್ ಹೇಳುವ ಎಲ್ಲ ಶಿಫಾರಸು ಸರಕಾರ ಅನುಷ್ಠಾನ ಮಾಡಲಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ
ಗುರುವಾರ ವಿಧಾನಸೌಧದಲ್ಲಿ ಒಳಮೀಸಲಾತಿ ಮಧ್ಯಂತರ ವರದಿ ಸಿಎಂಗೆ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಒಳಮೀಸಲಾತಿ ಬಗ್ಗೆ ನಮಗೆ ಬದ್ಧತೆ ಇದೆ. ನ್ಯಾ.ನಾಗಮೋಹನದಾಸ್ ಅವರು ಯಾವುದೇ ಶಿಫಾರಸು ಮಾಡಿದರೂ ಸರಕಾರ ಅದನ್ನು ಜಾರಿ ಮಾಡಲಿದೆ ಎಂದರು.
ಇನ್ನು ಒಳ ಮೀಸಲಾತಿ ವರದಿ ಹಿನ್ನಲೆಯಲ್ಲಿ ಅನೇಕ ನೇಮಕಾತಿ ಸ್ಥಗಿತವಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಆರ್.ಬಿ.ತಿಮ್ಮಾಪುರ, ಸಾಕಷ್ಟು ವರ್ಷಗಳಿಂದ ಮೀಸಲಾತಿ ಬಗ್ಗೆ ಹೋರಾಟಗಳ ನಡೆಯುತ್ತಿವೆ. ಇನ್ನು 4-5 ತಿಂಗಳು ತಡೆದುಕೊಂಡರೆ ಏನೂ ಆಗುವುದಿಲ್ಲ ಎಂದರು.