ಸಂಸತ್‌ ಭದ್ರತಾ ವೈಫಲ್ಯ: ಆರೋಪಿ ಮನೋರಂಜನ್ ಮನೆಗೆ ಆಂತರಿಕ ಭದ್ರತಾ ತಂಡ ಭೇಟಿ, ಪರಿಶೀಲನೆ

Update: 2023-12-14 13:59 GMT

ಮೈಸೂರು: ದಿಲ್ಲಿಯ ಸಂಸತ್‌ ಭವನದಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದ ವೇಳೆ ಸ್ಮೋಕ್ ಬಾಂಬ್‌ ಸಿಡಿಸಿ ಬಂಧನಕ್ಕೆ ಒಳಗಾಗಿರುವ ಮೈಸೂರಿನ ಮನೋರಂಜನ್‌ ನಿವಾಸಕ್ಕೆ ಪೊಲೀಸರಿಂದ ಬಿಗಿ ಭದ್ರತೆ ನೀಡಲಾಗಿದೆ.

ದೇಶದ ಆಂತರಿಕ ಭದ್ರತಾ ಇಲಾಖೆ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಮನೋರಂಜನ್‌ ಪೋಷಕರಿಂದ ಗುರುವಾರ ಮಾಹಿತಿ ಪಡೆದುಕೊಂಡಿದ್ದಾರೆ. ಜಲದಶಿರ್ನಿ ಅತಿಥಿಗೃಹದ ಆವರದಣದಲ್ಲಿರುವ ಸಂಸದರ ಕಚೇರಿಗೂ ಭೇಟಿ ನೀಡಿದ್ದಾರೆ.

ಪ್ರಕರಣದ ಸಂಬಂಧ ದಿಲ್ಲಿಯ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ದೆಹಲಿಯಿಂದ ತನಿಖಾಧಿಕಾರಿಗಳು ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೋರಂಜನ್‌ ನಿವಾಸಕ್ಕೆ ನಗರ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.

ವಿಜಯನಗರದಲ್ಲಿರುವ ಸಂಸದ ಪ್ರತಾಪಸಿಂಹ ಅವರ ನಿವಾಸಕ್ಕೂ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಮನೋರಂಜನ್‌ಗೆ ಉದ್ಯೋಗದಲ್ಲಿ ನಿರಾಸಕ್ತಿ: ಸಮಾಜ ಸೇವೆ ಬಗ್ಗೆ ಆಸಕ್ತಿ ಹೊಂದಿದ್ದ ಮನೋರಂಜನ್‌ ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕವೂ ಕೆಲಸ ಮಾಡಲು ನಿರಾಸಕ್ತಿ ಹೊಂದಿದ್ದ. ಕಳೆದ 1 ದಶಕದಿಂದ ಕ್ರಾಂತಿಕಾರಿ ನಾಯಕರ ಪುಸ್ತಕಗಳ ಅಧ್ಯಯನದಲ್ಲಿ ತೊಡಗಿದ್ದ ಎಂಬುದು ತಿಳಿದುಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News