ಅಕ್ರಮಗಳ ಬಗ್ಗೆ ಪ್ರಧಾನಿಯವರ ಮೌನ ಸಮ್ಮತಿಯ ಲಕ್ಷಣ: ಬಿ.ಕೆ. ಹರಿಪ್ರಸಾದ್

Update: 2023-07-21 07:29 GMT

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಪ್ರಧಾನಿಯವರ ಮೌನದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮೌನವು ಸಮ್ಮತಿಯ ಸೂಚನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗುಜರಾತಿನ ವಡೋದರದ ಬೀದಿಯಲ್ಲಿ ಅಲ್ಪಸಂಖ್ಯಾತ ಗರ್ಭಿಣಿ ಮಹಿಳೆಯ ಹೊಟ್ಟೆಗೆ ತ್ರಿಶೂಲ ಚುಚ್ಚಿ ಮೆರವಣಿಗೆ ಮಾಡಿದಾಗ ಮೌನವಹಿಸಿದ್ದು ಇದೇ 56 ಇಂಚಿನ ಎದೆ. ಇಂದು ಮಣಿಪುರದ ಬೀದಿಯಲ್ಲಿ ಮಹಿಳೆಯರ ನಗ್ನ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸೆಯುವಾಗಲೂ 56 ಇಂಚಿನ ಎದೆಯಲ್ಲಿ ಮತ್ತದೇ ಮೌನ! ಮೌನಂ ಸಮ್ಮತಿ ಲಕ್ಷಣಂ ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News