ಬೆಳಗಾವಿಯಲ್ಲಿ ಅಂತರ್ ರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧ: ಸಚಿವ ಬಿ.ನಾಗೇಂದ್ರ

Update: 2023-12-13 15:08 GMT

ಬೆಳಗಾವಿ: ‘ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ಬಳಿಯ ಸರಕಾರಿ ಜಾಗದಲ್ಲಿ, ಸುಸಜ್ಜಿತ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸರಕಾರ ಸಿದ್ಧವಿದೆʼ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಅಭಯ್ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಒದಗಿಸುವ ಅನುದಾನದ ಜೊತೆ ರಾಜ್ಯ ಸರಕಾರವು ಅನುದಾನ ನೀಡಿ ಕ್ರೀಡಾಂಗಣ ನಿರ್ಮಿಸಲು ಅಡ್ಡಿಯಿಲ್ಲ. ಯಳ್ಳೂರು ಗ್ರಾಮದ ಸರ್ವೆ ನಂ. 1142ರ 66 ಎಕರೆ ಪೈಕಿ 40 ಎಕರೆ ಜಮೀನು ಕ್ರೀಡಾ ಇಲಾಖೆ ಹಸ್ತಾಂತರವಾಗಿದೆ. ಪಾರ್ಕಿಂಗ್ ಒಳಗೊಂಡಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕನಿಷ್ಟ 55 ಎಕರೆ ಜಮೀನಿ ಅಗತ್ಯ.

ಈಗಾಗಲೇ ಜಮೀನು ಹಸ್ತಾಂತರ ಪ್ರಕ್ರಿಯೆ ಸಲುವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 11 ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಸ್ಥಳೀಯ ಶಾಸಕರು ಅವಶ್ಯ ಇರುವ 15 ಎಕರೆ ಜಮೀನು ಒದಗಿಸಿದರೆ ಶೀಘ್ರವಾಗಿ ಕ್ರೀಡಾಂಗಣ ನಿರ್ಮಾಣದ ಯೋಜನೆ ರೂಪಿಸಲಾಗುವುದು ಎಂದು ಬಿ.ನಾಗೇಂದ್ರ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News