ಸಹಾಯಕ ಪ್ರಾಧ್ಯಾಪಕರ ನೇಮಕಾತಿ | 2023ರಲ್ಲೇ ಅಂತಿಮ ಆಯ್ಕೆ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ : ಕೆಇಎ

Update: 2024-06-26 12:36 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನೇಮಕಾತಿ ಆದೇಶ ಜಾರಿ ಮಾಡವುದಿಲ್ಲ. ಬದಲಾಗಿ 2023ರಲ್ಲೇ ಆಯ್ಕೆ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಕೆಇಎನ ಕಾರ್ಯನಿರ್ವಹಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, 2023 ಮಾ.3ರಂದು 26 ವಿಷಯಗಳ ಅಂತಿಮ ಆಯ್ಕೆ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿ, ಪ್ರಕಟಿಸಲಾದ ಅಂತಿಮ ಆಯ್ಕೆ ಪಟ್ಟಿಯನ್ನು ಹಾಗೂ ಆಯ್ಕೆ ಪಟ್ಟಿಯಲ್ಲಿನ 1208 ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳ ಪ್ರತಿಗಳು, ದಾಖಲೆಗಳ ಪ್ರತಿ ಮತ್ತು ಮೀಸಲಾತಿ ಕೋರಿ ಸಲ್ಲಿಸಿರುವ ದಾಖಲಾತಿಗಳ ಪ್ರತಿಗಳನ್ನು ಲಗತ್ತಿಸಿ ಮಾ.7ರಂದು ರಂದು ಸರಕಾರಕ್ಕೆ ಪತ್ರ ಬರೆದು ಕಳುಹಿಸಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಇಎ ಪರೀಕ್ಷಾ ಪ್ರಾಧಿಕಾರವಾದ್ದರಿಂದ ನೇಮಕಾತಿ ಆದೇಶ ಜಾರಿ ಮಾಡಲು ಪ್ರಾಧಿಕಾರಕ್ಕೆ ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ಕೆಇಎ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿರುವುದರಿಂದ ಮುಂದಿನ ಪ್ರಕ್ರಿಯೆಯು ನೇಮಕಾತಿ ಪ್ರಾಧಿಕಾರವು(ಉನ್ನತ ಶಿಕ್ಷಣ ಇಲಾಖೆ) ಕೈಗೊಳ್ಳಬೇಕಿರುತ್ತದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News