ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ: ಸಂಪುಟ ಸಭೆ ಒಪ್ಪಿಗೆ

Update: 2024-07-17 03:09 GMT

ಬೆಂಗಳೂರು: ಕನಾಟಕದಲ್ಲಿ ಎಲ್ಲ ಖಾಸಗಿ ಕಂಪನಿಗಳ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಶೇಕಡ 100ರಷ್ಟು ಕನ್ನಡಿಗರನ್ನೇ ಭರ್ತಿ ಮಾಡಿಕೊಳ್ಳಬೇಕು ಎಂದು ಕಡ್ಡಾಯಪಡಿಸುವ ಮಸೂದೆಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಎಲ್ಲ ಖಾಸಗಿ ಕಂಪನಿಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಶೇಕಡ ಕನ್ನಡಿಗರನ್ನು ನೇಮಕ ಮಾಡುವ ಸಂಬಂಧದ ಮಸೂದೆಗೆ ನಿನ್ನೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ಕನ್ನಡ ಭೂಮಿಯಲ್ಲಿ ಕನ್ನಡಿಗರನ್ನು ಉದ್ಯೋಗ ವಂಚಿತರನ್ನಾಗಿ ಮಾಡದೇ, ಅವರು ಆರಾಮದಾಯಕ ಜೀವನ ಸಾಗಿಸುವಂತೆ ಮಾಡುವ ನಿಟ್ಟಿನಲ್ಲಿ ಇದು ಸರ್ಕಾರದ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.

ನಮ್ಮದು ಕನ್ನಡ ಪರ ಸರ್ಕಾರ. ನಮ್ಮ ಆದ್ಯತೆ ಕನ್ನಡಿಗರ ಕಲ್ಯಾಣ ಎಂದು ವಿವರಿಸಿದ್ದಾರೆ. ಕಾನೂನು ಸಚಿವಾಲಯ ಈ ಸಂಬಂಧದ ಮಸೂದೆಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಿದೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News