ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

Update: 2025-04-08 12:57 IST
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು: ಮಾ.1ರಿಂದ ಮಾ.20ರ ವರೆಗೆ ನಡೆದಿದ್ದ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು (ಎ.8) ಪ್ರಕಟಗೊಂಡಿದೆ.

ಈ ಸಂಬಂಧ ಇಲ್ಲಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಲಾ ವಿಭಾಗದಲ್ಲಿ ಸಂಜನಾ ಬಾಯಿ, ವಾಣಿಜ್ಯ ವಿಭಾಗದಲ್ಲಿ ದೀಪ‍‍ಶ್ರೀ ಮತ್ತು ವಿಜ್ಞಾನ ವಿಭಾಗದಲ್ಲಿ ಅಮೂಲ್ಯಾ ಕಾಮತ್‌ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ, ಯಾದಗಿರಿಗೆ ಕೊನೆಯ ಸ್ಥಾನ ಪಡೆದಿದೆ ಎಂದು ಮಾಹಿತಿ ನೀಡಿದರು.

https://karresults.nic.in ಜಾಲತಾಣದಲ್ಲಿ ಮಧ್ಯಾಹ್ನ 1:30 ಗಂಟೆಯ ನಂತರ ಫಲಿತಾಂಶ ವೀಕ್ಷಿಸಬಹುದಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6,37,805 ವಿದ್ಯಾರ್ಥಿಗಳು ಬರೆದಿದ್ದರು. 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಜಿಲ್ಲಾವಾರು ಫಲಿತಾಂಶ : 

ಉಡುಪಿ ಜಿಲ್ಲೆ ಶೇಕಡಾ 93.90, ದಕ್ಷಿಣ ಕನ್ನಡ ಜಿಲ್ಲೆ 93.57, ಬೆಂಗಳೂರು ದಕ್ಷಿಣ 85.36, ಕೊಡಗು ಜಿಲ್ಲೆ 83.84, ಬೆಂಗಳೂರು ಉತ್ತರ 83.31, ಉತ್ತರ ಕನ್ನಡ ಜಿಲ್ಲೆ 82.93, ಶಿವಮೊಗ್ಗ 79.91, ಬೆಂಗಳೂರು ಗ್ರಾಮಾಂತರ ಜಿಲ್ಲೆ 79.70, ಚಿಕ್ಕಮಗಳೂರು 79.56, ಹಾಸನ 77.56, ಚಿಕ್ಕಬಳ್ಳಾಪುರ  75.80, ಮೈಸೂರು 74.30, ಚಾಮರಾಜನಗರ 73.97, ಮಂಡ್ಯ  73.27, ಬಾಗಲಕೋಟೆ  72.83, ಕೋಲಾರ 72.45, ಧಾರವಾಡ 72.32, ತುಮಕೂರು 72.02, ರಾಮನಗರ ಜಿಲ್ಲೆ 69.71, ದಾವಣಗೆ 69.45, ಹಾವೇರಿ76.56, ಬೀದರ್  67.31ರಷ್ಟು ಫಲಿತಾಂಶ ಬಂದಿದೆ.

ಕೊಪ್ಪಳ  67.20, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 66.76, ಗದಗ ಜಿಲ್ಲೆ 66.64, ಬೆಳಗಾವಿ 65.37, ಬಳ್ಳಾರಿ ಜಿಲ್ಲೆ 64.41, ಚಿತ್ರದುರ್ಗ ಜಿಲ್ಲೆ 59.87, ವಿಜಯಪುರ ಜಿಲ್ಲೆ 58.81, ರಾಯಚೂರು ಜಿಲ್ಲೆ 58.75, ಕಲಬುರಗಿ ಜಿಲ್ಲೆ 55.70, ಯಾದಗಿರಿ ಜಿಲ್ಲೆ 48.45ರಷ್ಟು ಫಲಿತಾಂಶ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News