ಲೈಂಗಿಕ ಹಗರಣ ಪ್ರಕರಣ | ಪ್ರಜ್ವಲ್ ಪತ್ತೆಗೆ 196 ರಾಷ್ಟ್ರಗಳಿಗೆ ಇಂಟರ್ ಪೋಲ್ ಮಾಹಿತಿ

Update: 2024-05-07 16:21 GMT

Photo: X/ srinivasiyc

ಬೆಂಗಳೂರು: ಲೈಂಗಿಕ ಹಗರಣ ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಪತ್ತೆಗಾಗಿ 196 ರಾಷ್ಟ್ರಗಳಿಗೆ ಇಂಟರ್ ಪೋಲ್ ಮಾಹಿತಿ ರವಾನಿಸಿದೆ.

ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಇದೀಗ 196 ದೇಶಗಳಿಗೆ ಇಂಟರ್ ಪೋಲ್ ಮಾಹಿತಿ ರವಾನಿಸಿದೆ. ಈ ಕುರಿತು ವಿಶೇಷ ತನಿಖಾ ದಳಕ್ಕೆ ಇಂಟರ್ ಪೋಲ್ ಮಾಹಿತಿ ನೀಡಿದ್ದು, ಪ್ರಜ್ವಲ್ ರೇವಣ್ಣ ಪತ್ತೆಯಾದಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದೆ.

ವಿಶ್ವಾಸ ಇರಲಿ: ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದ ಬಗ್ಗೆ ವಿಶ್ವಾಸ ಇರಲಿ. ಎಸ್‌ಐಟಿ ಯಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ? ಮೊದಲು ತನಿಖೆ ಆಗಿ ಸತ್ಯಾಂಶ ಹೊರಬರಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸರಕಾರದ ಮೇಲೆ ಜವಾಬ್ದಾರಿಗಳಿರುತ್ತವೆ. ಸರಕಾರ ಅದರ ಸಂಸ್ಥೆ ಮತ್ತು ನಮ್ಮ ವ್ಯವಸ್ಥೆಯ ಬಗ್ಗೆ ಹಗುರವಾಗಿ ಮಾತಾಡುವುದು ಅವುಗಳ ಮೇಲೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಸಿಟ್ ಗೃಹ ಖಾತೆಯ ಒಂದು ಕಾನೂನಾತ್ಮಕ ಅಂಗ, ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಅವರಿಗೆ ಎಲ್ಲ ಗೊತ್ತಿದೆ. ಅದು ಮಾಡುತ್ತಿರುವ ತನಿಖೆ ಮುಗಿದು ವರದಿ ಸರಕಾರಕ್ಕೆ ಸಿಕ್ಕ ಬಳಿಕ ಅದು ಸಾರ್ವಜನಿಕ ವಲಯಕ್ಕೂ ಲಭ್ಯವಾಗುತ್ತದೆ. ಆಗ ಟೀಕೆ-ಟಿಪ್ಪಣಿ, ವಿಶ್ಲೇಷಣೆ ಮಾಡಲಿ, ಯಾರೂ ಬೇಡ ಎನ್ನುತ್ತಾರೆ? ಎಂದು ಪರಮೇಶ್ವರ್ ಹೇಳಿದರು.

ಇಂಟರ್ ಪೋಲ್ (ಇಂಟರ್ ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಸೇಶನ್) ಎಂಬುದು ಅಂತರ-ಸರಕಾರಿ ಸಂಸ್ಥೆಯಾಗಿದ್ದು, ಅದರ ಕೇಂದ್ರ ಕಚೇರಿ ಫ್ರಾನ್ಸ್ ನ ಲಿಯಾನ್‍ನಲ್ಲಿದೆ. ಪ್ರಸ್ತುತ 196 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಇಂಟ‌ರ್ ಪೋಲ್ ತನ್ನ ಸದಸ್ಯ ರಾಷ್ಟ್ರಗಳ ತನಿಖಾ ಸಂಸ್ಥೆಗಳಿಗೆ ಅಗತ್ಯವಿರುವ ಅಪರಾಧಿಗಳು ಮಾಹಿತಿ ಅಥವಾ ಕ್ರಿಮಿನಲ್ ಡೇಟಾವನ್ನ ಪರಸ್ಪರ ಹಂಚಿಕೊಳ್ಳುವ ಒಪ್ಪಂದವನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News