ನಿಗಮ ಮಂಡಳಿ ಹುದ್ದೆಗೆ ಕೊಡಬೇಕಾದ ಕಲೆಕ್ಷನ್ ಪ್ರಮಾಣ ಮತ್ತೆ ಚರ್ಚೆಗೆ: ಬಿಜೆಪಿ ಆರೋಪ

Update: 2023-11-22 06:19 GMT

Photo: twitter

ಬೆಂಗಳೂರು, ನ.22: ರಾಜ್ಯದಲ್ಲಿ ನಿಗಮ ಮಂಡಳಿ ಹುದ್ದೆಗೆ ಕೊಡಬೇಕಾದ ಕಲೆಕ್ಷನ್ ಪ್ರಮಾಣ ಮತ್ತೆ ಚರ್ಚೆಗೆ ಬಂದಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಈ ಬಗ್ಗೆ 'BJP Karnataka' 'ಎಕ್ಸ್' ಖಾತೆಯಲ್ಲಿ ಮಾಡಿರುವ ಪೋಸ್ಟ್ ನಲ್ಲಿ, "ಈಗಾಗಲೇ ವರ್ಗಾವಣೆಯನ್ನು ಫೋನ್ ಕರೆಯಲ್ಲೇ ನಿಭಾಯಿಸುವ ವ್ಯವಸ್ಥಿತ ದಂಧೆಯನ್ನಾಗಿ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರ ಸರ್ಕಾರ ನಿಗಮ ಮಂಡಳಿ ಹರಾಜಿಗೆ ಇಷ್ಟು ದಿನ ಕಾಯತ್ತಿತ್ತು. ಈ ಹಿಂದೆ ವ್ಯವಹಾರ ಸರಿಯಾಗಿ ಕುದುರದ ಕಾರಣ ಮುಂದೂಡಲಾಗಿದ್ದ ನಿಗಮ ಮಂಡಳಿ ಹುದ್ದೆಗಳ ಹರಾಜು ಪ್ರಕ್ರಿಯೆ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ದಿಲ್ಲಿಯಿಂದ ಬಂದು ಸಮಾಲೋಚನೆಗಳನ್ನು ನಡೆಸಿದ್ದಾರೆ. ಪರಿಣಾಮವಾಗಿ ನಿಗಮ ಮಂಡಳಿ ಹುದ್ದೆಗೆ ಕೊಡಬೇಕಾದ ಕಲೆಕ್ಷನ್ ಪ್ರಮಾಣ ಮತ್ತೆ ಚರ್ಚೆಗೆ ಬಂದಿದೆ'' ಎಂದು ಆರೋಪಿಸಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News