‘ಪ್ರವಾಸ ಉತ್ತೇಜನ’ ಯೋಜನೆ ಮರು ಸ್ಥಾಪಿಸಲು ಸಿಎಂಗೆ ಪತ್ರ ಬರೆದ ಯು.ಟಿ. ಖಾದರ್

Update: 2025-01-27 21:15 IST
‘ಪ್ರವಾಸ ಉತ್ತೇಜನ’ ಯೋಜನೆ ಮರು ಸ್ಥಾಪಿಸಲು ಸಿಎಂಗೆ ಪತ್ರ ಬರೆದ ಯು.ಟಿ. ಖಾದರ್
  • whatsapp icon

ಬೆಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿ ದುಡಿದು, ನಿವೃತ್ತಿಯ ನಂತರ ತಮ್ಮ ಊರಿಗೆ ಬಂದು ನೆಲಸಿದಾಗ ಹಲವಾರು ಆರ್ಥಿಕ, ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಜಾರಿಗೆ ತಂದಿದ್ದ ‘ಪ್ರವಾಸ ಉತ್ತೇಜನ’ ಯೋಜನೆಯನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದ್ದು, ಈ ಯೋಜನೆಯನ್ನು ಮರು ಸ್ಥಾಪಿಸಬೇಕೆಂದು ಸ್ಪೀಕರ್ ಯು.ಟಿ.ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್‍ಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೀಡುತ್ತಿದ್ದ ಪ್ರವಾಸ ಉತ್ತೇಜನ ಯೋಜನೆಯನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದೆ. ಗಲ್ಫ್ ರಾಷ್ಟ್ರಗಳಿಂದ ನಿವೃತ್ತಿಯ ನಂತರ ಬರುವ ಹಲವರ ಬದುಕಿಗೆ ಈ ಯೋಜನೆ ನೆರವಾಗಲಿದೆ. ಆದ್ದರಿಂದ ಸಬ್ಸಿಡಿ ಸಹಿತ ಬಡ್ಡಿ ರಹಿತ ಸಾಲ ನೀಡುವ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಅವರ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡುವಂತೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಶಿಫಾರಸ್ಸು ಮಾಡಬೇಕೆಂದು ಪತ್ರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News