ನಾವು ದೇವರು-ಧರ್ಮದ ವಿರೋಧಿಗಳಲ್ಲ: ಸಿಎಂ ಸಿದ್ದರಾಮಯ್ಯ

Update: 2024-01-12 10:53 GMT

Photo: facebook/siddaramaiah

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ನಾಯಕರು ಮೂರ್ತಿ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರೊಪಗಾಂಡ ಕಾರ್ಯಕ್ರಮ ಮಾಡಿರುವುದನ್ನು ಪ್ರತಿಭಟಿಸಿ ನಾವು ಆ ಸಮಾರಂಭದಿಂದ ದೂರ ಇದ್ದೇವೆಯೇ ಹೊರತು ನಾವೇನು ದೇವರು-ಧರ್ಮದ ವಿರೋಧಿಗಳಲ್ಲ ಎಂದು ಸಿಎಂ ಸಿದ್ದಾರಾಮಯ್ಯ ಹೇಳಿದ್ದಾರೆ.

ಈ ಕುರಿತು ʼಎಕ್ಸ್‌ʼ ನಲ್ಲಿ ಬರೆದುಕೊಂಡಿರುವ ಅವರು, "ರಾಮಲಲ್ಲ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವನ್ನು ಬೆಂಬಲಿಸುತ್ತೇನೆ ಎಂಬ ಹೇಳಿಕೆಯ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಯಥಾಪ್ರಕಾರ ನನ್ನನ್ನು ಹಿಂದು ವಿರೋಧಿ ಎಂದು ಚಿತ್ರಿಸಲು ನಾಲಗೆ ಹರಿಬಿಡುತ್ತಿದ್ದಾರೆ" ಎಂದು ಹೇಳಿದರು.

"ನಾನು ಹಿಂದೂ ವಿರೋಧಿಯೂ ಅಲ್ಲ, ಶ್ರೀರಾಮಚಂದ್ರನ ವಿರೋಧಿಯೂ ಅಲ್ಲ. ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಿಜೆಪಿ ನಾಟಕ ಮಂಡಳಿಯ ಪ್ರದರ್ಶನವೆಲ್ಲ ಮುಗಿದ ನಂತರ ಅರಾಮವಾಗಿ ಒಂದು ದಿನ ನಾನು ಅಯೋಧ್ಯೆಗೆ ಹೋಗಿ ರಾಮ ಮಂದಿರಕ್ಕೂ ಭೇಟಿ ನೀಡಿ ಬರಬೇಕೆಂದು ತೀರ್ಮಾನ ಮಾಡಿದ್ದೇನೆ. ನನ್ನನ್ನು ಶ್ರೀ ರಾಮಚಂದ್ರನ ವಿರೋಧಿಯೆಂದು ಕತೆ ಕಟ್ಟುತ್ತಿರುವವರ ಜೊತೆಗೂ ಆ ಭೇಟಿಯ ಪೋಟೋಗಳನ್ನು ಹಂಚಿಕೊಳ್ಳುತ್ತೇನೆ"  ಎಂದರು.

ʼನಾವು ಮಾತ್ರವಲ್ಲ ಹಿಂದೂ ಧರ್ಮದ ಹಿರಿಯ ಸ್ವಾಮೀಜಿಗಳಾದ ಶಂಕರಾಚಾರ್ಯರು ಕೂಡಾ ಜನವರಿ 22ರಂದು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಕೇಂದ್ರ ಬಿಜೆಪಿ ಮತ್ತು ಆರೆಸ್ಸೆಸ್ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ನನಗೂ ಇದೆʼ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News