ಬಿಜೆಪಿ ನಾಯಕರನ್ನು ಮುಗಿಸಲು ತಂದೆ-ಮಕ್ಕಳ ತಂತ್ರ: ಯಡಿಯೂರಪ್ಪ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ

Update: 2024-03-12 14:37 GMT

ಬಸನಗೌಡ ಪಾಟೀಲ್ ಯತ್ನಾಳ್

ಯಾದಗಿರಿ: ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿಸುವ ಮೂಲಕ ‘ಪೂಜ್ಯ ತಂದೆ ಮತ್ತು ಮಕ್ಕಳು’ ಬಿಜೆಪಿ ನಾಯಕರನ್ನು ಮುಗಿಸಲು ತಂತ್ರ ಹೂಡಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಕಿಡಿಗಾರಿದ್ದಾರೆ.

ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇನ್ನಿತರರಿಗೆ ಟಿಕೆಟ್ ಕೈತಪ್ಪುವ ಕುರಿತು ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಹಿರಿಯ ಮಗ ರಾಘವೇಂದ್ರ ಅವರನ್ನು ಮಂತ್ರಿ ಮಾಡುವುದು. ರಾಜ್ಯದಲ್ಲಿ ಕಿರಿಯ ಮಗ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡುವ ಹುನ್ನಾರ ಯಡಿಯೂರಪ್ಪ ಅವರದ್ದಾಗಿದೆ ಎಂದು ದೂರಿದರು.

ನನಗೆ ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅವಕಾಶ ಕಲ್ಪಿಸಿದ್ದರು. ಆದರೆ ನನ್ನನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತೇನೆ ಎಂದರು ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನೇನಾದರೂ ದಿಲ್ಲಿಗೆ ಹೋದರೆ ಇಲ್ಲಿ ಅಪ್ಪ-ಮಗನ ರಾಜ್ಯ ನಡೆಯುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದ ನಾಯಕರೆಲ್ಲರೂ ಲೋಕಸಭಾ ಚುನಾವಣೆ ಬಳಿಕ ಅಂತ್ಯವಾಗುತ್ತಾರೆ. ರಾಜ್ಯದಲ್ಲಿ ವಿಜಯೇಂದ್ರ ನೋಡಿ ಯಾರೂ ಮತ ಹಾಕಲ್ಲ. ಇದು ನರೇಂದ್ರ ಮೋದಿ ಚುನಾವಣೆ, ಯಾರೆ ಪಕ್ಷದ ಅಧ್ಯಕ್ಷರಾಗಿದ್ದರೂ ರಾಜ್ಯದಲ್ಲಿ ಮೋದಿ ಹೆಸರಿನಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News