ಸೆಲ್ಫೀ ತೆಗೆಯಲು ಮುಂದಾದ ಪ್ರವಾಸಿಗರ ಮೇಲೆ ದಾಳಿಗೆ ಯತ್ನಿಸಿದ ಕಾಡಾನೆ
ಚಾಮರಾಜನಗರ: ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಕಾಡಾನೆಯೊಂದು ಪ್ರವಾಸಿಗರಿಬ್ಬರ ಮೇಲೆ ದಾಳಿಗೆ ಮುಂದಾಗಿದ್ದು, ಅದೃಷ್ಟವಷಾತ್ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಕೇರಳದ ವಯನಾಡಿಗೆ ಹೋಗುವ ಮಾರ್ಗಮಧ್ಯೆ ಮುತ್ತುಂಗ ಬಳಿ ಕಾಡಾನೆಯೊಂದು ಪ್ರವಾಸಿಗರಿಬ್ಬರ ಮೇಲೆ ದಾಳಿಗೆ ಯತ್ನಿಸಿದೆ.
ಪ್ರವಾಸಿಗರಿಬ್ಬರು ಕಾಡಿನ ಬದಿಯಲ್ಲಿ ನಿಂತು ಕಾಡಾನೆಯೊಂದಿಗೆ ಸೆಲ್ಫಿಗೆ ಮುಂದಾಗಿದ್ದು, ಈ ವೇಳೆ ಕೆರಳಿದ ಕಾಡಾನೆ ದಾಳಿಗೆ ಮುನ್ನುಗಿದೆ ಎನ್ನಲಾಗಿದೆ. ಕೂದೆಳೆಯ ಅಂತರದಲ್ಲಿ ಪ್ರವಾಸಿಗರು ಪಾರದಿದ್ದಾರೆ.
ಪ್ರವಾಸಿಗರ ಹುಚ್ಚು ಪ್ರಯತ್ನಕ್ಕೆ ಅರಣ್ಯಾಧಿಕಾರಿಗಳು ಕ್ರಮವಹಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಗ್ರಹಿಸಿದ್ದಾರೆ.
ಸೆಲ್ಫೀ ತೆಗೆಯಲು ಮುಂದಾದ ಪ್ರವಾಸಿಗರ ಮೇಲೆ ದಾಳಿಗೆ ಯತ್ನಿಸಿದ ಕಾಡಾನೆ
— ವಾರ್ತಾ ಭಾರತಿ | Vartha Bharati (@varthabharati) February 1, 2024
► ಬಂಡೀಪುರ–ವಯನಾಡು ಹೆದ್ದಾರಿಯಲ್ಲಿ ನಡೆದ ಘಟನೆಯ ವಿಡಿಯೋ ವೈರಲ್#BandipurNationalPark #Bandipur #Wayanad #Selfie #Elephant #Masinagudi #Mudumalai pic.twitter.com/iDgv6NODSX