ಎನ್ ಸಿಪಿ ಪಕ್ಷದ ಹೆಸರು, ಚಿಹ್ನೆಯ ಹಕ್ಕಿಗಾಗಿ ಚುನಾವಣಾ ಆಯೋಗದ ಮೊರೆ ಹೋದ ಅಜಿತ್ ಪವಾರ್

Update: 2023-07-05 10:10 GMT

ಮುಂಬೈ: ಶರದ್ ಪವಾರ್ ಅವರ ಎನ್ ಸಿಪಿ ಹಾಗೂ ಆ ಪಕ್ಷದ ಚಿಹ್ನೆಯ ಹಕ್ಕು ಪಡೆಯಲು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ  ಅಜಿತ್ ಪವಾರ್ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ ಎಂದು NDTV ವರದಿ ಮಾಡಿದೆ.

ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ ಸಿಪಿ)  ಒಂದು ಬಣವನ್ನು ಮುನ್ನಡೆಸುತ್ತಿರುವ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಸ್ಥಾಪಿಸಿದ ಪಕ್ಷದ ಹೆಸರು ಹಾಗೂ ಅದರ ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದಾರೆ.

ಅಜಿತ್ ಪವಾರ್ ಅವರು ಭಾರತೀಯ ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದು, ತನಗೆ 40 ಕ್ಕೂ ಹೆಚ್ಚು ಶಾಸಕಾಂಗ ಸಭೆ (ಎಂಎಲ್ಎಗಳು) ಮತ್ತು ಸಂಸತ್ ಸದಸ್ಯರುಗಳ (ಎಂಪಿಗಳು) ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಬಣ, ಚುನಾವಣಾ ಆಯೋಗವು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮ ವಾದ ಕೇಳುವಂತೆ ಮನವಿ ಮಾಡಿದ್ದು, ಚುನಾವಣಾ ಪ್ರಾಧಿಕಾರಕ್ಕೆ ಕೇವಿಯಟ್ ಸಲ್ಲಿಸಿದೆ. ಆಯೋಗವು ಮುಂದಿನ ದಿನಗಳಲ್ಲಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸಜ್ಜಾಗಿದೆ 

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News