ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಮಾನವ ನಿಯಂತ್ರಣ ಅತ್ಯಗತ್ಯ : ಚೀನಾ-ಅಮೆರಿಕ ಅಧ್ಯಕ್ಷರ ಸಹಮತ
ಲಿಮಾ : ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಮಾನವ ನಿಯಂತ್ರಣವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಒತ್ತಿ ಹೇಳಿದ್ದು ಕೃತಕ ಬುದ್ಧಿಮತ್ತೆಯ ಅಪಾಯದ ಬಗ್ಗೆ ಚರ್ಚೆ ನಡೆಸಲು ಸಮ್ಮತಿಸಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಕುರಿತು ಮಾನವರು ನಿರ್ಧರಿಸಬೇಕೇ ಹೊರತು ಎಐ ಅಲ್ಲ ಎಂದು ಉಭಯ ಮುಖಂಡರು ದೃಢಪಡಿಸಿದ್ದಾರೆ.
ಪೆರು ದೇಶದಲ್ಲಿ ನಡೆಯುತ್ತಿರುವ ಏಶ್ಯಾ ಪೆಸಿಫಿಕ್ ಆರ್ಥಿಕ ಸಹಕಾರ (ಅಪೆಕ್)ಶೃಂಗಸಭೆಯ ನೇಪಥ್ಯದಲ್ಲಿ ಉಭಯ ಮುಖಂಡರು ಭೇಟಿಯಾಗಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು, ಎರಡೂ ದೇಶಗಳ ನಡುವೆ ಸಹಕಾರ ಮತ್ತು ಭಿನ್ನಮತ ಇರುವ ವಿಷಯಗಳ ಕುರಿತು ಚರ್ಚೆ ನಡೆಸಿದರು. ಕೃತಕ ಬುದ್ಧಿಮತ್ತೆ(ಎಐ)ಯ ಸಂಭಾವ್ಯ ಅಪಾಯಗಳನ್ನು ಎಚ್ಚರಿಕೆಯಿಂದ ಪರಿಗಣಿಸುವ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ವಿವೇಕಯುತ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿಹೇಳಿದರು ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
ಈ ಪ್ರಗತಿಯು ಪರಮಾಣು ಶಸ್ತ್ರಾಸ್ತ್ರ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಚರ್ಚೆಗಳಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ಪರಮಾಣು ಶಸ್ತ್ರಾಸ್ತ್ರ ಕುರಿತು ಮಾತುಕತೆಯಲ್ಲಿ ತೊಡಗಿಸಿಕೊಳ್ಳುವಂತೆ ಅಮೆರಿಕವು ಚೀನಾವನ್ನು ಆಗ್ರಹಿಸುತ್ತಿದೆ. ಚೀನಾವು ಪ್ರಸ್ತುತ ಸುಮಾರು 500 ಕಾರ್ಯಾಚರಣಾ ಪರಮಾಣು ಸಿಡಿತಲೆಗಳನ್ನು ಹೊಂದಿದೆ. 2030ರ ವೇಳೆಗೆ ಈ ಸಂಖ್ಯೆ 1000ವನ್ನು ದಾಟಬಹುದು ಎಂದು ಅಮೆರಿಕದ ರಕ್ಷಣಾ ಇಲಾಖೆ ಅಂದಾಜಿಸಿದೆ. ಅಮೆರಿಕ ಮತ್ತು ಚೀನಾಗಳು ಈ ತಿಂಗಳು ಅಧಿಕಾರಿಗಳ ಮಟ್ಟದ ಪರಮಾಣು ಮಾತುಕತೆಯನ್ನು ಮುಂದುವರಿಸಿದ್ದವು. ಆದರೆ ಮಾತುಕತೆ ಸ್ಥಗಿತಗೊಂಡಿದ್ದು ಇದಕ್ಕೆ ಚೀನಾದಿಂದ ಸೂಕ್ತ ಸ್ಪಂದನೆಯ ಕೊರತೆ ಕಾರಣ ಎಂದು ಅಮೆರಿಕ ಆರೋಪಿಸಿದೆ.
`ಎರಡು ದೇಶಗಳ ಜನರ ಅನುಕೂಲಕ್ಕಾಗಿ, ಚೀನಾ-ಅಮೆರಿಕ ಸಂಬಂಧಗಳ ಸ್ಥಿರ ಪರಿವರ್ತನೆಗಾಗಿ ಶ್ರಮಿಸಲು, ಸಂವಹನವನ್ನು ನಿರ್ವಹಿಸಲು, ಸಹಕಾರವನ್ನು ವಿಸ್ತರಿಸಲು ಮತ್ತು ವ್ಯತ್ಯಾಸಗಳನ್ನು ಚೀನಾವು ಅಮೆರಿಕದ ಹೊಸ ಆಡಳಿತದೊಂದಿಗೆ ಕೆಲಸ ಮಾಡಲು ಸಿದ್ಧವಿದೆ' ಎಂದು ಕ್ಸಿ ಹೇಳಿದ್ದಾರೆ.
ಎರಡೂ ದೇಶಗಳು ಪರಸ್ಪರರ ಪಾಲುದಾರರು ಮತ್ತು ಸ್ನೇಹಿತರಂತೆ ವರ್ತಿಸಿದಾಗ, ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವಾಗ, ಮತ್ತು ಪರಸ್ಪರರ ಯಶಸ್ಸಿಗೆ ಸಹಾಯ ಮಾಡಿದಾಗ ನಮ್ಮ ಸಂಬಂಧವು ಗಣನೀಯ ಪ್ರಗತಿಯನ್ನು ಸಾಧಿಸುತ್ತದೆ. ಆದರೆ ನಾವು ಒಬ್ಬರನ್ನೊಬ್ಬರು ಪ್ರತಿಸ್ಪರ್ಧಿಯಾಗಿ, ಅಥವಾ ಎದುರಾಳಿಗಳಾಗಿ ಪರಿಗಣಿಸಿದರೆ, ಕೆಟ್ಟ ಸ್ಪರ್ಧೆಯನ್ನು ಮುಂದುವರಿಸಿದರೆ ಮತ್ತು ಒಬ್ಬರನ್ನೊಬ್ಬರು ನೋಯಿಸಲು ಪ್ರಯತ್ನಿಸಿದರೆ ನಮ್ಮ ಸಂಬಂಧಗಳನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಆದ್ದರಿಂದ ಜಾಣ ಆಯ್ಕೆಯನ್ನು ಮಾಡಬೇಕು. ಎರಡು ಪ್ರಮುಖ ದೇಶಗಳು ಪರಸ್ಪರ ಚೆನ್ನಾಗಿ ಹೊಂದಿಕೊಳ್ಳಲು ಸರಿಯಾದ ಮಾರ್ಗವನ್ನು ಅನ್ವೇಷಿಸಬೇಕು ಎಂದು ಕ್ಸಿ ಹೇಳಿರುವುದಾಗಿ ಚೀನಾದ ವಿದೇಶಾಂಗ ಇಲಾಖೆ ವರದಿ ಮಾಡಿದೆ.
► ಹಿಂದಿನ ಸಾಲಿನಲ್ಲಿ ಜೋ ಬೈಡನ್
ಅಪೆಕ್ ಶೃಂಗಸಭೆಯ ಅಂತ್ಯದಲ್ಲಿ ಮುಖಂಡರ ಗ್ರೂಫ್ ಫೋಟೋದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‍ಗೆ ಹಿಂದಿನ ಸಾಲಿನಲ್ಲಿ ಸ್ಥಾನ ನೀಡಲಾಗಿದ್ದರೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಎದುರಿನ ಸಾಲಿನಲ್ಲಿ ಮಧ್ಯದಲ್ಲಿ ನಿಂತಿದ್ದರು. ಈ ಫೋಟೋದ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.
ಕ್ಸಿ ಜಿಂಪಿಂಗ್ ಮುಂದಿನ ಸಾಲಿನ ಮಧ್ಯದಲ್ಲಿ ಆತಿಥೇಯ ದೇಶ ಪೆರುವಿನ ಅಧ್ಯಕ್ಷ ಡಿನಾ ಬೊಲುವಾರ್ಟೆಯ ಪಕ್ಕದಲ್ಲಿ ನಿಂತಿದ್ದರೆ ಬೈಡನ್ ಹಿಂದಿನ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.
`ಒಂದು ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ. ಜಾಗತಿಕ ಮುಖಂಡರಲ್ಲಿ ಅಧ್ಯಕ್ಷ ಜೋ ಬೈಡನ್ ಕುರಿತು ಗೌರವ ಕಡಿಮೆಯಾಗಿರುವುದನ್ನು ಇದು ಸೂಚಿಸುತ್ತದೆ' ಎಂದು ರಿಪಬ್ಲಿಕನ್ ಸಂಸದರು ಟೀಕಿಸಿದ್ದಾರೆ.
Family photo of leaders attending the APEC Economic Leaders’ Meeting.
— Shen Shiwei 沈诗伟 (@shen_shiwei) November 16, 2024
The leaders are standing in alphabetical order, withAustraliaBruneiCanada andChina toward the front of the alphabet andThailandUnited States right beforeVietnam at the end.#APECPeru2024 pic.twitter.com/uJhWDm1YzX