ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಲು ಪ್ರೋತ್ಸಾಹಿಸಿ: ಯು. ಟಿ.ಖಾದರ್
Update: 2023-07-23 08:33 GMT
ಮಂಗಳೂರು : ಮಕ್ಕಳಲ್ಲಿ ಬಾಲ್ಯದಲ್ಲೇ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಭಿರುಚಿ ಮೂಡಿಸಿದಾಗ ಸೌಹಾರ್ದ ಸಮಾಜ ನಿರ್ಮಿಸಲು ಸಾಧ್ಯ. ಅದುವೇ ಭವಿಷ್ಯದಲ್ಲಿ ಬಲಿಷ್ಠ ರಾಷ್ಟ್ರಕ್ಕೆ ಬುನಾದಿಯಾಗುತ್ತದೆ ಎಂದು ವಿಧಾನ ಸಭೆಯ ಸಭಾಪತಿ ಯು. ಟಿ. ಖಾದರ್ ಹೇಳಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ನಗರದ ಓಶಿಯನ್ ಪರ್ಲ್ ಸಭಾಂಗಣ ದಲ್ಲಿ ಏರ್ಪಡಿಸಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು . ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ಪರಿಷತ್ ಅಧ್ಯಕ್ಷ ಯು. ಎಚ್. ಖಾಲಿದ್ ಮಾತನಾಡಿ ಖಾದರ್ ರವರು ತನ್ನ ಸರಳತೆ, ತಾಳ್ಮೆ , ಸಹೋದರತೆ ಮತ್ತು ಸೇವಾ ಮನೋಭಾವದ ಮೂಲಕ ಸ್ಪೀಕರ್ ಹುದ್ದೆಯಷ್ಟು ಎತ್ತರಕ್ಕೆ ಏರಿದ್ದಾರೆ, ಜನಮಾನಸದಲ್ಲಿ ನೆಲೆಸಿದ್ದಾರೆ ಎಂದರು.
ಈ ಸಮಾರಂಭದಲ್ಲಿ ಪರಿಷತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ನಿಸಾರ್ ಮಹಮ್ಮದ್ ವಂದಿಸಿದರು. ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.