ಮಂಗಳೂರು: ಮಾದಕ ವಸ್ತುವಿನಿಂದ ಕೂಡಿದ ಚಾಕಲೇಟ್ ಪತ್ತೆ ಪ್ರಕರಣ; ಎಫ್‌ ಎಸ್‌ಎಲ್ ವರದಿ ಬಳಿಕ ಕ್ರಮ: ಕಮಿಷನರ್

Update: 2023-07-21 10:00 GMT

ಮಂಗಳೂರು, ಜು.21: ನಗರದ ಎರಡು ಅಂಗಡಿಗಳಿಂದ ಬುಧವಾರ ಮಾದಕ ವಸ್ತುವಿನಿಂದ ಕೂಡಿದ 108 ಕೆಜಿ ಚಾಕಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮಾದಕ ವಸ್ತು ಇರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅದನ್ನು ತಪಾಸಣೆಗಾಗಿ ಎಫ್‌ಎಸ್‌ಎಲ್ ವರದಿಗಾಗಿ ಕಳುಹಿಸಲಾಗಿದೆ. ಅದರ ವರದಿ ಆಧಾರದಲ್ಲಿ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ತಿಳಿಸಿದ್ದಾರೆ.

ಆರೋಪಿಗಳು ಈ ಚಾಕಲೇಟನ್ನು ಉತ್ತರ ಪ್ರದೇಶದಿಂದ ತಂದು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳಿಂದಲೇ ಬಂದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ನಗರದ ನೂರಕ್ಕೂ ಅಧಿಕ ಅಂಗಡಿಗಳಿಗೆ ಪರಿಶೀಲನೆ ಮಾಡಿದ್ದೇವೆ. ಕಲಬೆರಕೆ ಅಪರಾಧ ಕೃತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News