ಮಂಗಳೂರು: 23 ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಸುಲಿಗೆ ಪ್ರಕರಣದ ಆರೋಪಿ ಸೆರೆ

Update: 2023-07-27 04:15 GMT

ಮಂಗಳೂರು: ಸುಲಿಗೆ ಪ್ರಕರಣದಲ್ಲಿ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಉಳ್ಳಾಲದ ಬಶೀರ್(51) ಎಂದು ಗುರುತಿಸಲಾಗಿದೆ. ಈತನನ್ನು‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

2000 ,ಡಿಸೆಂಬರ್ 17ರಂದು ರಾತ್ರಿ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಆರೋಪಿಗಳು ಚೂರಿ ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಸಿದು ಸುಲಿಗೆ ಮಾಡಿ ಪರಾರಿಯಾಗಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಅಕ್ರ 130/2000 ಕಲಂ: 392 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಹುಸೇನ್, ಮೊಹಮ್ಮದ್ ಹುಸೇನ್ ಬಶೀರ್ ಮತ್ತು ಮೊಯ್ದೀನ್ ಕುದ್ರೋಳಿ ಎಂಬವರ ಹೆಸರುಗಳಿದ್ದು, ಹುಸೇನ್, ಮೊಹಮ್ಮದ್ ಹುಸೇನ್ ಮತ್ತು ಮೊಯ್ದೀನ್ ಕುದ್ರೋಳಿ ಎಂಬವರನ್ನು ದಸ್ತಗಿರಿ ಮಾಡಲಾಗಿತ್ತು .

ಆರೋಪಿ ಬಶೀರ್ ಎಂಬಾತನು ತಲೆ ಮರೆಸಿಕೊಂಡಿದ್ದು ಈತನ ವಿರುದ್ದ ನ್ಯಾಯಾಲಯವು ಉದ್ಘೋಷಣೆಯನ್ನು ಹೊರಡಿಸಿತ್ತು. ಆದರೆ ಆರೋಪಿಯು ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದು ಜುಲೈ 26ರಂದು ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News