ಮಾಣಿ: ಧರಾಶಾಹಿಯಾದ ಬೃಹತ್ ಮರ; ವಾಹನಗಳ ಸಂಚಾರಕ್ಕೆ ಅಡ್ಡಿ
Update: 2023-07-22 05:35 GMT
ಬಂಟ್ವಾಳ: ಭಾರೀ ಮಳೆಗೆ ಮರವೊಂದು ಹೆದ್ದಾರಿಗೆ ಅಡ್ಡವಾಗಿ ಬಿದ್ದ ಘಟನೆ ಶನಿವಾರ ಬೆಳಿಗ್ಗೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ನೇರಳಕಟ್ಟೆ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮರ ಬೀಳುವಾಗ ಅದರೊಂದಿಗೆ ವಿದ್ಯುತ್ ಕಂಬ, ತಂತಿಗಳು ರಸ್ತೆ ಮೇಲೆ ಬಿದ್ದಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿರುತ್ತದೆ. ಇದರಿಂದ ಎರಡು ಬದಿಯಲ್ಲಿ ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿವೆ.
ಸ್ಥಳೀಯರು ಹಾಗೂ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ತೆರವು ಕಾರ್ಯ ನಡೆಸುತ್ತಿದ್ದಾರೆ.