ಮಣಿಪುರ ಪ್ರಕರಣ; ರಾಷ್ಟ್ರಪತಿಗಳ ಮಧ್ಯ ಪ್ರವೇಶ ಅನಿವಾರ್ಯ: ಐವನ್ ಡಿ ಸೋಜ

Update: 2023-07-23 10:46 GMT

ಮಂಗಳೂರು,ಜು.23;ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ, ಹಿಂಸೆ ಸೇರಿದಂತೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗಟ್ಟಿರುವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ತಕ್ಷಣ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಯನ್ನು ನಿಯಂತ್ರಿಸಬೇಕು. ಅಲ್ಲಿನ ಆದಿವಾಸಿ ಬುಡಕಟ್ಟು ಸೇರಿದಂತೆ ಜನ ಸಾಮಾನ್ಯರ ರಕ್ಷಣೆ ಗೆ ಮುಂದಾಗಬೇಕು ಎಂದು ಮಾಜಿ ಶಾಸಕ ಹಾಗೂ ಎಐಸಿಸಿ ಮುಖಂಡ ಐವನ್ ಡಿ ಸೋಜ ಆಗ್ರಹಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪುರದ ಘಟನೆಯ ಬಗ್ಗೆ ದೇಶದ ಪ್ರಧಾನಿ ಮತ್ತು ಅಲ್ಲಿನ ಮುಖ್ಯಮಂತ್ರಿ ತಳೆದಿರುವ ನಿಲುವು ನಾಚಿಗೇಡು.ಅಲ್ಲಿ ಹಿಂಸೆ ದೌರ್ಜನ್ಯ ಹತ್ತಿಕ್ಕುವ ಬದಲು ಪ್ರಧಾನ ಮಂತ್ರಿ ಗುಜರಾತ್, ಛತ್ತೀಸ್ ಗಡದ ಉದಾಹರಣೆ ನೀಡುತ್ತಿದ್ದಾರೆ. ಇತರ ದೇಶದ ರಾಜಕೀಯ ಮುಖಂಡರ 'ಚುನಾವಣಾ ಪ್ರಚಾರ'ಕ್ಕೆತೆರಳುವ ನಮ್ಮ ದೇಶದ ಪ್ರಧಾನಿ ಮಣಿಪುರದ ಸಮಸ್ಯೆ ಬಗೆಹರಿಸಲು ಎಷ್ಟು ಸಮಯ ನೀಡುತ್ತಿದ್ದಾರೆ. ಅಲ್ಲಿ ಮಾನ ವೀಯತೆಯ ಕುರುಹು ಇಲ್ಲದಂತೆ ಹಿಂಸಾಚಾರ ನಡೆಯುತ್ತಿದೆ . ದೇಶದ ಬಿಜೆಪಿಯ ಮಹಿಳಾ ಸಂಸದರು, ಸಚಿವರು ಮಹಿಳಾ ದೌರ್ಜನ್ಯದ ಬಗ್ಗೆ ಮೌನವಹಿಸಿರುವುದು ನಾಚಿಗೇಡು ಎಂದು ವಾಗ್ದಾಳಿ ನಡೆಸಿದರು.

ಮಂಗಳೂರು ಸೇರಿದಂತೆ ತಮ್ಮ ಕ್ಷೇತ್ರದಲ್ಲಿ ನ ಸಮಸ್ಯೆ ಗಳ ಗಮನ ಸೆಳೆಯಬೇಕಾದ ಸದನದಲ್ಲಿ ಸಭಾಪತಿ ಅವಕಾಶ ನೀಡಿದ ನಂತರ ,ಮುಖಂಡರ ಜೊತೆ ಮಾತುಕತೆ ನಡೆದ ಬಳಿಕವೂ ಜಿಲ್ಲೆಯ ಜನತೆ ತಲೆ ತಗ್ಗಿಸುವ ರೀತಿಯಲ್ಲಿ ಕಾಗದವನ್ನು ಹರಿದು ಸಭಾಧ್ಯಕ್ಷ ರ ಮುಖದ ಮೇಲೆ, ಪೀಠದ ಮೇಲೆ ಎಸೆದು ಅನುಚಿತವಾಗಿ ವರ್ತಿಸಿದ್ದಾರೆ.ಅದಕ್ಕಾಗಿ ಅಮಾನತು ಗೊಂಡಿದ್ದಾರೆ.ಸ್ಪೀಕರ್ ಸರಿಯಾದ ಕ್ರಮ ಕೈ ಗೊಂಡಿದ್ದಾರೆ.ರಾಜ್ಯದ ಲ್ಲಿ ಬಿಜೆಪಿ ನಾವಿಕನಿಲ್ಲದ ಹಡಗಿನಂತಾಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಕರ್ನಾಟಕ ಹೊರತಾಗಿ ವಿಪಕ್ಷಗಳು ನಾಯಕನಿಲ್ಲದೆ ಬಜೆಟ್ ಅಧಿವೇಶನ ನಡೆದ ಉದಾಹರಣೆಗಳಿಲ್ಲ ಎಂದು ಐವನ್ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News