ಬೈಕ್ ರಿಪೇರಿ ಮಾಡುವ ಅಂಗಡಿಗೆ ರಾಹುಲ್ ಗಾಂಧಿ ಭೇಟಿ
ಭಾರತ್ ಜೋಡೋ ಯಾತ್ರೆಯಂತೆಯೇ ಜನರೊಂದಿಗೆ ತಮ್ಮ ಸಂವಾದವನ್ನು ಮುಂದುವರೆಸಿದ ಕಾಂಗ್ರೆಸ್ ನಾಯಕ ಸ್ಥಳೀಯ ಉದ್ಯಮಿಗಳು ಮತ್ತು ಮಾರುಕಟ್ಟೆಯ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಮೆಕ್ಯಾನಿಕ್ ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ದಿಲ್ಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ಬೈಕ್ ರಿಪೇರಿ ಮಾಡುವ ಅಂಗಡಿಗೆ ಭೇಟಿ ನೀಡಿದ್ದು, ಈ ಮೂಲಕ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸುವ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ.
ರಾಹುಲ್ ಅವರು ಸಂಜೆ 5:15 ರ ಸುಮಾರಿಗೆ ಮಾರುಕಟ್ಟೆಯನ್ನು ತಲುಪಿದರು ಹಾಗೂ ದೊಡ್ಡ ಜನಸಮೂಹವು ಅವರನ್ನು ಕಂಡು ಹರ್ಷೋದ್ಗಾರ ಮಾಡಿತು.
ಭಾರತ್ ಜೋಡೋ ಯಾತ್ರೆಯಂತೆಯೇ ಜನರೊಂದಿಗೆ ತಮ್ಮ ಸಂವಾದವನ್ನು ಮುಂದುವರಿಸಿದ ಕಾಂಗ್ರೆಸ್ ನಾಯಕ ಸ್ಥಳೀಯ ಉದ್ಯಮಿಗಳು ಮತ್ತು ಮಾರುಕಟ್ಟೆಯ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಮೆಕ್ಯಾನಿಕ್ ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
ಮಾಜಿ ಕಾಂಗ್ರೆಸ್ ಮುಖ್ಯಸ್ಥ, ತಮ್ಮ ಭೇಟಿಯ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ
ರಾಹುಲ್ ಗಾಂಧಿ ಸಂಜೆ 7 ಗಂಟೆಗೆ ಅಂಗಡಿಯಿಂದ ಹೊರಬಂದರು. ಅಂಗಡಿಯ ಹೊರಗೆ ನೆರೆದಿದ್ದ ಜನರೊಂದಿಗೆ ಕೈ ಕುಲುಕಿದರು ಹಾಗೂ ಚಿತ್ರಗಳನ್ನು ಕ್ಲಿಕ್ಕಿಸಿದರು.
ಈ ತಿಂಗಳ ಆರಂಭದಲ್ಲಿ, ರಾಹುಲ್ ಗಾಂಧಿಯವರು ವಾಷಿಂಗ್ಟನ್ ನಿಂದ ನ್ಯೂಯಾರ್ಕ್ ಗೆ ಟ್ರಕ್ ನಲ್ಲಿ ಪ್ರಯಾಣಿಸಿದ್ದರು ಮತ್ತು ಅಮೆರಿಕದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್ ಗಳ ದೈನಂದಿನ ಜೀವನವನ್ನು ಕೇಂದ್ರೀಕರಿಸಿ ಮಾತನಾಡಿದ್ದರು.