ಶಾಲಾ ನಿಧಿ ದುರುಪಯೋಗ ಪ್ರಕರಣ: ಕೇರಳ ಕಾಂಗ್ರೆಸ್ ಮುಖ್ಯಸ್ಥ ಕೆ. ಸುಧಾಕರನ್ ವಿರುದ್ದ ತನಿಖೆ ಆರಂಭ

Update: 2023-06-27 05:24 GMT

ತಿರುವನಂತಪುರಂ: ಕೇರಳದ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ವಿಎಸಿಬಿ) ಶಾಲಾ ನಿಧಿ ದುರುಪಯೋಗ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕೆ. ಸುಧಾಕರನ್ ವಿರುದ್ಧ ತನಿಖೆ ಆರಂಭಿಸಿದೆ,

ತನಿಖಾ ಸಂಸ್ಥೆಯು ಮಾಜಿ ರಾಜ್ಯ ಸಚಿವರಿಗೆ ನೋಟಿಸ್ ಕಳುಹಿಸಿದ್ದು, ಸುಧಾಕರ್ ಅವರ ಪತ್ನಿ ಸ್ಮಿತಾ ಅವರು 2001 ರಿಂದ ಕೆಲಸ ಮಾಡಿದ ಶಾಲೆಯಿಂದ ಪಡೆದ ಸಂಬಳದ ವಿವರಗಳನ್ನು ಕೇಳಿದೆ. ತನಿಖಾ ಸಂಸ್ಥೆಯು ಸುಧಾಕರನ್ ಅವರ ಪತ್ನಿಗೆ ಅವರ ಸಂಬಳದ ವಿವರಗಳನ್ನು ಕೋರಿ ನೋಟಿಸ್ ನೀಡಿದೆ.

ಕೆಪಿಸಿಸಿ ಮುಖ್ಯಸ್ಥ ಸುಧಾಕರನ್ ಅವರ ಮಾಜಿ ಚಾಲಕ ಪ್ರಶಾಂತ್ ಬಾಬು ಅವರ ದೂರನ್ನು ಆಧರಿಸಿ ಈ ಬೆಳವಣಿಗೆಯು ನಡೆದಿದೆ, ಕಣ್ಣೂರು ಜಿಲ್ಲೆಯಲ್ಲಿ ಶಾಲೆಯೊಂದನ್ನು ಖರೀದಿಸಲು ಸಂಗ್ರಹಿಸಿದ 16 ಕೋಟಿ ರೂ.ವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಸುಧಾಕರನ್ ವಿರುದ್ದ ಕೇಳಿಬಂದಿರುವ ಆರೋಪದ ಕುರಿತಂತೆ ತನಿಖೆ ನಡೆಸುವಂತೆ ಕೋರಿ ಚಾಲಕ ಬಾಬು 2 ವರ್ಷಗಳ ಹಿಂದೆ ದೂರು ದಾಖಲಿಸಿದ್ದರು.

ಏತನ್ಮಧ್ಯೆ, ಸುಧಾಕರನ್ ಹಾಗೂ ವಿರೋಧ ಪಕ್ಷದ ನಾಯಕ ವಿ. ಡಿ. ಸತೀಶನ್ ಸೋಮವಾರ ದಿಲ್ಲಿಗೆ ತೆರಳಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದರು.

ಸಭೆಯಲ್ಲಿ, ಕಾಂಗ್ರೆಸ್ನ ರಾಷ್ಟ್ರೀಯ ನಾಯಕತ್ವಕ್ಕೆ ಅದರ ಕೇರಳ ಘಟಕದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿಸಲಾಯಿತು. ವಿರೋಧ ಪಕ್ಷದ ನಾಯಕರ ವಿರುದ್ಧ ಸಿಎಂ ಪಿಣರಾಯಿ ವಿಜಯನ್ ಸರಕಾರದ ಸೇಡಿನ ವರ್ತನೆ ಹಾಗೂ ಸಂಘಟನಾ ಸಮಸ್ಯೆಗಳ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News