ಚಿಕ್ಕಮಗಳೂರು: ಯುವಕನಿಗೆ ಚೂರಿ ಇರಿತ; ಪ್ರಕರಣ ದಾಖಲು

Update: 2023-07-05 06:08 GMT

ಚಿಕ್ಕಮಗಳೂರು: ಯುವಕನೊಬ್ಬ ಚೂರಿ ಇರಿತಕ್ಕೊಳಗಾದ ಘಟನೆ ಕಡೂರು ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಚಾಕು ಇರಿತಕ್ಕೆ ಒಳಗಾದ ಯುವಕನನ್ನು ಕಡೂರು ಪಟ್ಟಣದ ಸಿ.ಪಿ.ಸಿ ಕಾಲೋನಿ ನಿವಾಸಿ ವಿಘ್ನೇಶ್ ಎಂದು ಗುರುತಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ 8 ಮಂದಿ ಯುವಕರ ತಂಡದಿಂದ ಕೃತ್ಯ ನಡೆದಿದೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡ ವಿಘ್ನೇಶ್ ನನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News