ಉದ್ಯೋಗಿಗಳನ್ನು ಮತ್ತೆ ಕಚೇರಿಯತ್ತ ಆಕರ್ಷಿಸಲು ಗೂಗಲ್ ಸಂಸ್ಥೆಯ ನೂತನ ತಂತ್ರ
ಕ್ಯಾಲಿಫೋರ್ನಿಯಾ: ಗೂಗಲ್ ಸಂಸ್ಥೆಯು ತನ್ನ ಸಿಬ್ಬಂದಿಗಳಿಗೆ ಕ್ಯಾಲಿಫೋರ್ನಿಯಾದಲ್ಲಿನ ತನ್ನ ಮೌಂಟೇನ್ ವ್ಯೂ ಕ್ಯಾಂಪಸ್‌ನಲ್ಲಿರುವ ಹೋಟೆಲ್‌ನಲ್ಲಿ ಬೇಸಿಗೆ ವಿಶೇಷ ಕಳೆಯುವ ಕೊಡುಗೆಯನ್ನು ನೀಡಿದ್ದು, ಈ ಯೋಜನೆಯಿಂದ ಅವರನ್ನೆಲ್ಲ ಮರಳಿ ಕಚೇರಿಯತ್ತ ಆಕರ್ಷಿಸಬಹುದು ಎಂಬ ವಿಶ್ವಾಸ ಹೊಂದಿದೆ ಎಂದು hindustantimes.com ವರದಿ ಮಾಡಿದೆ.
ಆದರೆ, ಈ ಕೊಡುಗೆಯು ಕೇವಲ ಗೂಗಲ್ ಉದ್ಯೋಗಿಗಳಿಗೆ ಮಾತ್ರವಾಗಿದ್ದು, ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂ ಕ್ಯಾಂಪಸ್‌ನಲ್ಲಿರುವ ಸಂಪೂರ್ಣವಾಗಿ ಪೀಠೋಪಕರಣಸಜ್ಜಿತವಾಗಿರುವ 240 ಕೋಣೆಗಳ ಹೋಟೆಲ್‌ನಲ್ಲಿ ಅವರಿಗೆಲ್ಲ ಬೇಸಿಗೆ ವಿಶೇಷ ಕಳೆಯುವ ಕೊಡುಗೆಯನ್ನು ನೀಡಿದೆ. ಈ ಯೋಜನೆಯಿಂದ ಅವರನ್ನೆಲ್ಲ ಮತ್ತೆ ಕಚೇರಿಯತ್ತ ಆಕರ್ಷಿಸಬಹುದು ಎಂಬ ವಿಶ್ವಾಸ ಅದರದಾಗಿದೆ.
ಹುಡುಕಾಟ ತಂತ್ರಜ್ಞಾನದ ದೈತ್ಯ ಸಂಸ್ಥೆಯಾದ ಗೂಗಲ್‌ಗೆ ತನ್ನ ಉದ್ಯೋಗಿಗಳು ವಾರದಲ್ಲಿ ಮೂರು ಬಾರಿ ಕಚೇರಿಗೆ ಬರುವುದು ಬೇಕಿದೆ. ಆದರೆ, ಸೆಪ್ಟೆಂಬರ್ 3ರಂದು ಪ್ರಾರಂಭವಾಗಲಿರುವ ಈ ಯೋಜನೆಯು ತನ್ನ ಉದ್ಯೋಗಿಗಳು ಕಚೇರಿಯ ಸಮೀಪವೇ ವಾಸಿಸುವುದರಿಂದ ಅವರ ಪ್ರಯಾಣ ಮತ್ತು ಸಮಯವನ್ನು ಉಳಿತಾಯ ಮಾಡಲಿದೆ. ಅದರಿಂದ ಗೂಗಲ್ ಉದ್ಯೋಗಿಗಳು ತನ್ನ ಬಹೂಪಯೋಗಿ ಉದ್ಯೋಗ ತಾಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿದೆ ಎಂದು ಗೂಗಲ್ ಭಾವಿಸಿದೆ.
ಋತುಮಾನದ ರಿಯಾಯಿತಿ ಅನ್ವಯ ಪೂರ್ಣಕಾಲಿಕ ಉದ್ಯೋಗಿಗಳು ಹೋಟೆಲ್‌ನಲ್ಲಿ ರೂ. 999 ಡಾಲರ್ ತೆತ್ತು ಕೋಣೆಯನ್ನು ಕಾಯ್ದಿರಿಸಬಹುದಾಗಿದ್ದು, ಈ ಸೌಲಭ್ಯವನ್ನು ಅವರು ತಮ್ಮ ವೈಯಕ್ತಿಕ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪಡೆಯಬಹುದಾಗಿದೆ ಎಂದು CNBC ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ಈ ಯೋಜನೆಯು ಕೇವಲ ಉತ್ತೇಜಕ ಕೊಡುಗೆಯಾಗಿದ್ದು, ಈ ಯೋಜನೆಯು ಕೇವಲ ಅನುಮೋದನಾರಹಿತ ಉದ್ಯೋಗ ಪ್ರವಾಸಗಳಿಗೆ ಮಾತ್ರ ಅನ್ವಯವಾಗಲಿದೆ. ಅದಕ್ಕಾಗಿ ವ್ಯಯಿಸಲಾಗುವ ಮೊತ್ತಕ್ಕೆ ಮರುಪಾವತಿ ಸೌಲಭ್ಯವಿರುವುದಿಲ್ಲ ಎಂದೂ ಹೇಳಲಾಗಿದೆ.
ಕಳೆದ ಎಪ್ರಿಲ್ ತಿಂಗಳಲ್ಲಿ ವಾರಕ್ಕೆ ಮೂರು ದಿನ ಕಡ್ಡಾಯವಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದ ನಂತರ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಗೂಗಲ್‌ಗೆ ತನ್ನ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆ ತರುವುದೇ ತ್ರಾಸದಾಯಕವಾಗಿ ಪರಿಣಮಿಸಿದೆ.