ತುಮಕೂರು: ಸರಕಾರಿ ಶಾಲಾ ಮೈದಾನ ವಶಪಡಿಸಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್ ಗೆ ಅರ್ಜಿ

Update: 2024-02-20 09:20 GMT

ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೋರ ಹೋಬಳಿಯ ಬೆಳಧರ ಗ್ರಾಮದ ಹಿರಿಯ ಪ್ರಾರ್ಥಮಿಕ ಪಾಠಶಾಲೆ ಆಟದ ಮೈದಾನದ ಸುತ್ತ ಹಾಕಿರುವ (ಪೆನ್ಸಿಂಗ್) ಬೇಲಿಯನ್ನು ಮತ್ತು ನೆಟ್ಟಿರುವ ಗಿಡಗಳನ್ನು ಧ್ವಂಸಗೊಳಿಸಿ ಸರ್ಕಾರಿ ಶಾಲೆಯ ಆಟದ ಮೈದಾನವನ್ನು ವಶಪಡಿಸಿಕೊಂಡಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ತುಮಕೂರು ತಾಲೂಕು ಶಿಕ್ಷಣಾಧಿಕಾರಿ, ತಹಶೀಲ್ದಾರ್, ಮತ್ತು ಕೋರ ಪೊಲೀಸ್ ಠಾಣೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನೈಜ ಹೋರಾಟಗಾರರ ವೇದಿಕೆ ವತಿಯಿಂದ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಬೇಕೆಂದು ವಿನಂತಿಸಲಾಗಿದೆ.

1976 ನೇ ಇಸವಿಯಲ್ಲಿ ಬೆಳೆದರೆ ಹಿರಿಯ ಪ್ರಾರ್ಥಮಿಕ ಪಾಠಶಾಲೆಯ ಆಟದ ಮೈದಾನವನ್ನು ಸರ್ಕಾರ ಮಂಜೂರು ಮಾಡಿದ್ದು. ಈವರೆಗೂ ಅಧಿಕಾರಿಗಳು ಅದನ್ನು ಕಾಂಪೌಂಡ್ ಹಾಕಿ ರಕ್ಷಣೆ ಮಾಡದೇ ಇರುವುದರಿಂದ ತುಮಕೂರಿನ ಕಾಳಜಿ ಫೌಂಡೇಶನ್ ಹೋರಾಟಗಾರರು ಪರಿಶ್ರಮದಿಂದ ಕೋರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಎಸ್ ಡಿ ಎಂ ಸಿ ಸದಸ್ಯರೊಂದಿಗೆ ಮುಳ್ಳು ತಂತಿ ಬೇಲಿಯನ್ನು ಆಟದ ಮೈದಾನದ ಸುತ್ತ ನಿರ್ಮಿಸಿ ಗಿಡಗಳನ್ನು ನೆಟ್ಟಿದ್ದರು.

ಈ ಆಟದ ಮೈದಾನವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ರಾತ್ರೋರಾತ್ರಿ ಬುಲ್ಡೋಜರ್ ಗಳನ್ನು ತಂದು ಬೇಲಿಯನ್ನು ಮತ್ತು ಗಿಡಗಳನ್ನು ದ್ವಂಸ ಮಾಡಿರುವವರ ವಿರುದ್ಧ ಶಿಕ್ಷಣ ಇಲಾಖೆಯ ಬಿ.ಇ.ಓ, ತುಮಕೂರು ತಹಶೀಲ್ದಾರ್, ಕೋರ ಪೊಲೀಸ್ ಠಾಣೆ ಅಧಿಕಾರಿಗಳು ಧ್ವಂಸಗೊಳಿಸಿದವರ ಮೇಲೆ ಯಾವುದೇ ಕಾನೂನು ಕ್ರಮಗಳನ್ನು ಜರುಗಿಸದೆ ಇರುವುದರಿಂದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಹಂತದಲ್ಲಿ ತುಂಬಾ ತೊಂದರೆ ಉಂಟಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News