ಎಲ್‌.ಕೆ.ಅಡ್ವಾಣಿ ಇಹಲೋಕ ತ್ಯಜಿಸಿದ್ದಾರೆ ಎಂದು ಹೇಳಿ ಮೌನಾಚರಣೆಗೆ ಕರೆ ಕೊಟ್ಟ ಕೇಂದ್ರ ಸಚಿವ ವಿ.ಸೋಮಣ್ಣ

Update: 2024-07-06 19:05 IST
ಎಲ್‌.ಕೆ.ಅಡ್ವಾಣಿ ಇಹಲೋಕ ತ್ಯಜಿಸಿದ್ದಾರೆ ಎಂದು ಹೇಳಿ ಮೌನಾಚರಣೆಗೆ ಕರೆ ಕೊಟ್ಟ ಕೇಂದ್ರ ಸಚಿವ ವಿ.ಸೋಮಣ್ಣ
  • whatsapp icon

ತುಮಕೂರು : ಜು.3ರಂದು ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಮಾಜಿ ಉಪ ಪ್ರಧಾನಿ, ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ಅಡ್ವಾಣಿ ಆಸ್ಪತ್ರೆ ಡಿಸ್ಚಾರ್ಚ್‌ ಆಗಿದ್ದರು. ಆದರೆ ಇಂದು ತುಮಕೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಬದುಕಿರುವ ಅಡ್ವಾಣಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಆಯೋಜನೆಗೊಂಡಿದ್ದ ಅಭಿನಂದನಾ ಸಭೆಯಲ್ಲಿ ಈ ಪ್ರಸಂಗ ನಡೆದಿದೆ. ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಇಹಲೋಕ ತ್ಯಜಿಸಿದ್ದು, ಇದೀಗ ತಾನೇ ಮಾಹಿತಿ ಬಂದಿದೆ. ಈ ಸಂಬಂಧ ನಾನು ದಿಲ್ಲಿಗೆ ತೆರಳಬೇಕಾಗಿರುವ ಕಾರಣ ಕಾರ್ಯಕ್ರಮ ಮತ್ತೊಮ್ಮೆ ಮಾಡೋಣ. ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡುವಂತೆ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದರು.

ಈ ಹಿನ್ನಲೆಯಲ್ಲಿ ಸಭೆಯಲ್ಲಿ ಇದ್ದವರೆಲ್ಲರೂ ಮೌನಾಚರಣೆ ಮಾಡಿದ್ದಾರೆ. ಸಚಿವ ಸೋಮಣ್ಣ ಅವರ ಈ ಎಡವಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News