ಉಡುಪಿ: 8 ವಕ್ಫ್ ಸಂಸ್ಥೆಗಳಿಗೆ ಫ್ರೀಜರ್ ಬಾಕ್ಸ್ ಹಸ್ತಾಂತರ
ಉಡುಪಿ: ರಾಜ್ಯ ಸರಕಾರ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮೂಲಕ ಉಡುಪಿ ಜಿಲ್ಲೆಯ 8 ವಕ್ಫ್ ಸಂಸ್ಥೆಗಳಿಗೆ ಮೃತದೇಹಗಳ ಇಡುವ ಫ್ರೀಜರ್ ಬಾಕ್ಸ್‌ಗಳನ್ನು ಒದಗಿಸಿದ್ದು, ಇದರ ಹಸ್ತಾಂತರ ಕಾರ್ಯಕ್ರಮವು ಡಿ.25ರಂದು ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ವಕ್ಫ್ ಕಛೇರಿಯಲ್ಲಿ ಜರಗಿತು.
ಉಡುಪಿ ಜಾಮಿಯಾ ಮಸೀದಿ, ಕುಂದಾಪುರ ಜಾಮಿಯಾ ಮಸೀದಿ, ಕಾರ್ಕಳ ಸಾಲ್ಮರ್ ಮುಸ್ಲಿಂ ಜಮಾತ್ ಜುಮಾ ಮಸೀದಿ, ಕೋಟ ಜಾಮಿಯಾ ಮಸೀದಿ, ಕಟಪಾಡಿ ಜಾಮಿಯಾ ಮಸೀದಿ, ಮಲ್ಪೆ ಸೈಯದಿನ ಅಬೂಬಕ್ಕರ್ ಸಿದ್ದಿಕ್ ಮಸೀದಿ, ಮರವಂತೆ ನಾವುಂದ ಮುಹಿಯದ್ದೀನ್ ಜುಮ್ಮಾ ಮಸೀದಿ ಹಾಗೂ ಬೈಂದೂರು ಜಾಮಿಯಾ ಮಸೀದಿಗಳಿಗೆ ಉಡುಪಿ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಸಿ.ಎಚ್.ಅಬ್ದುಲ್ ಮುತಾಲಿ ವಂಡ್ಸೆ ಹಸ್ತಾಂತರಿಸಿದರು
ಬಳಿಕ ಮಾತನಾಡಿದ ಸಿ.ಎಚ್.ಅಬ್ದುಲ್ ಮುತಾಲಿ, ಫ್ರೀಜರ್ ಬಾಕ್ಸ್‌ಗಳಿಗೆ ಯಾವುದೇ ಬಾಡಿಗೆ ಇರುವುದಿಲ್ಲ. ಈ ಸಂಸ್ಥೆಗಳ ಆಸುಪಾಸಿನ ಜಮಾತಿನ ಬಾಂಧವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ನಾಜಿಯ ಹಾಗೂ ಸಲಹಾ ಸಮಿತಿಯ ಉಪಾಧ್ಯಕ್ಷೆ ಅಬ್ದುಲ್ ರಹಮಾನ್ ರಝ್ವಿ ಕಲ್ಕಟ್ಟ ಹಾಗೂ ಸದಸ್ಯರುಗಳಾದ ಆಸಿಫ್ ಕಟಪಾಡಿ, ಮನ್ಸೂರ್ ನಾವುಂದ, ಸುಬ್ಹಾನ್ ಹೊನ್ನಾಳ, ಹಮೀದ್ ಯುಸುಫ್ ಮೂಳುರು, ಅಬ್ದುಲ್ ಖಾಲಿಕ್ ಕಾರ್ಕಳ, ಇಜಾಜ್ ಕಾರ್ಕಳ ಹಾಗು ವಕ್ಫ್ ಕಚೇರಿ ಸಿಬ್ಬಂದಿ ಹಾಜರಿದ್ದರು.