ಆನ್‌ಲೈನ್‌ನಲ್ಲಿ 4.86 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2024-09-08 15:38 GMT

ಉಡುಪಿ, ಸೆ.8: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದೆಂದು ನಂಬಿಸಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಜಮ್ಮಿಲ್ ಖಾನ್ ಪಠಾನ(19) ಎಂಬವರು ಸ್ಟಾಕ್ ಮಾರ್ಕೆಟ್‌ನಲ್ಲಿ ಅಧಿಕ ಲಾಭಾಂಶ ಗಳಿಸಬಹುದೆಂದು ನಂಬಿ ಆ.23ರಿಂದ ಸೆ.6ರವರೆಗೆ ಆರೋಪಿಗಳು ತಿಳಿಸಿದ ವಿವಿಧ ಖಾತೆಗಳಿಗೆ ಒಟ್ಟು 4,86,885ರೂ. ಹಣವನ್ನು ಹೂಡಿಕೆ ಮಾಡಿದ್ದು, ತದನಂತರ ಹೂಡಿಕೆ ಮಾಡಿದ ಹಣವನ್ನು ನೀಡದೇ ಲಾಭಾಂಶವನ್ನು ನೀಡದೇ ವಂಚನೆ ಮಾಡಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News