ಉಡುಪಿ ಹತ್ಯಾಕಾಂಡ ʼವಿಶ್ವ ದಾಖಲೆʼ ಎಂದು ವಿಕೃತಿ ಮೆರೆದ ಹಿಂದುತ್ವವಾದಿ ಇನ್ಸ್ಟಾಗ್ರಾಮ್ ಖಾತೆ!
ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಕಿಡಿಗೇಡಿ ಹಿಂದುತ್ವವಾದಿಗಳು ಸಂಭ್ರಮಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹರಿಬಿಟ್ಟು ಆತಂಕ ಸೃಷ್ಟಿಸಿದ್ದಾರೆ.
ನ.12ರಂದು ನಡೆದ ಮುಸ್ಲಿಂ ಕುಟುಂಬದ ನಾಲ್ವರ ಭೀಕರ ಕೊಲೆಗಳಿಗೆ ಜಾತಿಬೇಧ ಮರೆತು ಎಲ್ಲರೂ ಮರುಗುತ್ತಿರುವಾಗ ಹಿಂದುತ್ವವಾದಿ ಪೇಜ್ ಒಂದು, ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ದ್ವೇಷ ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರದ ಸಚಿವರು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಾರೆಯೇ ವಿನಃ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ದ್ವೇಷಾಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಹಿಂದುತ್ವವಾದಿ ಹೆಸರಿನ ಪೇಜಿನಲ್ಲಿ ಕೊಲೆಯನ್ನು ಸಂಭ್ರಮಿಸಿ ಪೋಸ್ಟ್ ಹಾಕಲಾಗಿದೆ.
ಹಿಂದು ಮಂತ್ರ (Hindu_Mantra_) ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಬಗ್ಗೆ ಸ್ಟೋರಿ ಒಂದನ್ನು ಹಂಚಿಕೊಂಡಿದ್ದು, “15 ನಿಮಿಷದಲ್ಲಿ 4 ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ” ಎಂಬ ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಆರೋಪಿ ಪ್ರವೀಣ್ ಚೌಗಲೆ ಫೋಟೋಕ್ಕೆ ʼಕಿರೀಟʼವನ್ನು ತೊಡಿಸಿ ವಿಕೃತತೆ ಮೆರೆಯಲಾಗಿದೆ. ತಮ್ಮ ಕೃತ್ಯಕ್ಕೂ ಸಮರ್ಥನೆ ನೀಡಿರುವ ಕಿಡಿಗೇಡಿಗಳು ʼಉಡುಪಿ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ, ಆದ್ದರಿಂದ, ನಾವೂ ಈ ವಿಚಾರಕ್ಕೆ ಬರುವುದಿಲ್ಲʼ ಎಂದು ಬರೆಯಲಾಗಿದೆ.
ಇಷ್ಟು ಮಾತ್ರವಲ್ಲದೆ, ಈ ಇನ್ಸ್ಟಾಗ್ರಾಮ್ ಪುಟದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಈ ಖಾತೆಯಲ್ಲಿ ದ್ವೇಷವನ್ನು ಹರಡುವ ಪೋಸ್ಟ್‌ಗಳನ್ನು, ಸ್ಟೋರಿಗಳನ್ನು ಹಾಕಲಾಗುತ್ತಿದೆ.
ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡುವಂತಹ ಹಲವಾರು ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದ ಹಲವು ಪೋಸ್ಟ್‌ಗಳು ಈ ಖಾತೆಯಲ್ಲಿದೆ.
ಹರಿದಾಡುತ್ತಿರವ ಪೋಸ್ಟ್