ಸಾಮಾಜಿಕತಾಣದ ಆಹಾರ ಪದ್ಧತಿ ಬಗ್ಗೆ ಜಾಗೃತಿ ಕಾರ್ಯಾಗಾರ
Update: 2024-09-01 12:55 GMT
ಬ್ರಹ್ಮಾವರ, ಸೆ.1: ಅನಧಿಕೃತ ಮೂಲಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸೂಚಿಸಿದ ಅಥವಾ ಹಂಚಿಕೊಳ್ಳಲಾದ ಆಹಾರ ಕ್ರಮಗಳನ್ನು ಸರಿಯಾಗಿ ಪರಿಶೀಲಿಸದೆ ಅನುಸರಿಸುವುದರಿಂದ ಉಂಟಾಗುವ ಅಪಾಯಗಳ ಅರಿವು ಮೂಡಿಸಲು ಆಹಾರ ಮತ್ತು ತಂತ್ರಜ್ಞಾನದ ಕುರಿತು ಕಾರ್ಯಾಗಾರವನ್ನು ಇತ್ತೀಚೆಗೆ ಬ್ರಹ್ಮಾವರದ ಆಶ್ರಯ-ಹಿರಿಯ ನಾಗರಿಕರ ಮನೆಯ ಸದಸ್ಯರು ಗಳಿಗೆ ಆಯೋಜಿಸಲಾಗಿತ್ತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಸಂಶೋಧನಾ ತಂಡವು ಐಸಿಎಂಆರ್ ಪ್ರಾಯೋಜಿತ - ಜೆರೋಂ ಟೆಕ್ನಾಲಾಜಿ ಸಬಲೀಕರಣ ಕಾರ್ಯಕ್ರಮದ ಭಾಗವಾಗಿ ನಡೆದ ಕಾರ್ಯಾಗಾರವನ್ನು ಮಣಿಪಾಲ ವ್ಯಾಗ್ಶದ ಡಯಟೆಟಿಕ್ಸ್ ಮತ್ತು ಅಪ್ಲೈಡ್ ನ್ಯೂಟ್ರಿಷನ್ ವಿಭಾಗದ ಸಂಯೋಜಕಿ ಪಲ್ಲವಿ ಮಹೇಶ್ ಶೆಟ್ಟಿಗಾರ್ ನಡೆಸಿಕೊಟ್ಟರು.
ಆಶ್ರಯದ ಮುಖ್ಯ ಲೆಕ್ಕಾಧಿಕಾರಿ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ವ್ಯಾಗ್ಶ ಅಧ್ಯಾಪಕ, ಸಂಶೋಧನಾ ತಂಡದ ಸದಸ್ಯ ರಾಘವೇಂದ್ರ ಜಿ. ಮಾತನಾಡಿ ದರು. ಅಕ್ಷಯ, ಗಣೇಶ್, ಅಕ್ಷತಾ, ಹಾಗು ಜಿಇಪಿ ತಂಡದಿಂದ ಅಶ್ವಿನಿ, ಅರ್ಪಿತಾ ಸಹಕರಿಸಿದರು.