ಬ್ರಹ್ಮಾವರ ಲಾಕಪ್ ಡೆತ್ ಪ್ರಕರಣ: ತನಿಖೆಗೆ ಆಗ್ರಹಿಸಿ ಕೇರಳ ಸಿಎಂಗೆ ಬಿಜು ಮೋನ್ ಕುಟುಂಬ ದೂರು

Update: 2024-11-26 07:49 GMT
ಬಿಜು ಮೋನ್

ಉಡುಪಿ, ನ.26: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನವೆಂಬರ್ 9ರಂದು ನಡೆದಿದ್ದ ಲಾಕಪ್ ಡೆತ್ ನಲ್ಲಿ ಮೃತಪಟ್ಟ ಕೇರಳ ಮೂಲದ ಬಿಜು ಮೋನ್ ಸಾವಿನ ಬಗ್ಗೆ ಆತನ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.

ಬಿಜು ಮೋನ್ ಮೈಮೇಲೆ ಕೆಲ ಗಾಯಗಳ ಗುರುತು, ಮೊಣಕಾಲಿನ ಕೆಳಗೆ ಕೆಲ ಗಾಯದ ಗುರುತು ಕಂಡುಬಂದಿತ್ತು ಎಂದಿರುವ ಬಿಜು ಮೋನ್ ಕುಟುಂಬಸ್ಥರು ಹೇಳಿದ್ದಾರೆ. ಲಾಕಪ್ ಡೆತ್ ಪ್ರಕರಣದ ಬಗ್ಗೆ ಸಿಒಡಿ ತನಿಖೆ ನಡೆಯುತ್ತಿದ್ದು, ಆರೋಪಿ ಕುಸಿದು ಬಿದ್ದು ಸಾವನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಲಾಕಪ್ ಡೆತ್ ಎಂದು ಪ್ರಕರಣ ಬೆಳಕಿಗೆ ಬಂತು ಎಂದವರು ಹೇಳಿದ್ದಾರೆ.

ಇದೊಂದು ಅಸಹಜ ಸಾವು ಎಂದು ಕೇರಳ ಮುಖ್ಯಮಂತ್ರಿಗೆ ದೂರು ನೀಡಿರುವ ಕುಟುಂಬಸ್ಥರು, ಸಿಐಡಿ ಮೂಲಕ ಕೂಲಂಕಷ ತನಿಖೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಐಡಿಗೂ ಪತ್ರ ಮೂಲಕ ಮನವಿ ಮಾಡಿದ್ದಾರೆ.

ನಮಗೆ ನ್ಯಾಯ ಬೇಕು, ತಪ್ಪಿತಸ್ಥ ಪೊಲೀಸರಿಗೆ ಕಠಿಣ ಶಿಕ್ಷೆಯಾಗ ಬೇಕು ಎಂದು ಆಗ್ರಹಿಸಿರುವ ಬಿಜು ಮೋನ್ ಸಹೋದರ ಬಿನು ಯೋಹನ್ನಾನ್ ಹೇಳಿದ್ದಾರೆ. ಸಿಐಡಿ ಅಧಿಕಾರಿಗಳು ಹೇಳಿಕೆ ದಾಖಲಿಸಲು ಕರೆದ ಹಿನ್ನೆಲೆಯಲ್ಲಿ ನಾವು ಉಡುಪಿಗೆ ಬಂದಿದ್ದೇವೆ ಎಂದವರು ತಿಳಿಸಿದರು.

ನನ್ನ ಸಹೋದರನನ್ನು ಪೊಲೀಸರು ಕಾನೂನು ಪ್ರಕಾರವಾಗಿ ವಶಕ್ಕೆ ಪಡೆದ ಬಗ್ಗೆ ಅನುಮಾನವಿದೆ ಎಂದ ಅವರು ಮಹಿಳೆಯೋರ್ವಳ ದೂರಿನ ಹಿನ್ನೆಲೆಯಲ್ಲಿ ನನ್ನ ಸಹೋದರನನ್ನ ಬಂಧಿಸಲಾಗಿದೆ ಎಂದಿದ್ದರು. ಆದರೆ ದೂರು ಕೊಟ್ಟ ಮಹಿಳೆ, ಅವರ ಕೊಟ್ಟ ದೂರಿನ ಪ್ರತಿಯ ಬಗ್ಗೆ ಮಾಹಿತಿ ನೀಡಿಲ್ಲ.

ಇವೆಲ್ಲವನ್ನೂ ನಾವು ಕೇರಳ ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇವೆ. ಅಸಹಜ ಸಾವು ಎಂದು ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದೇವೆ ಎಂದರು.

ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ಮೇರೆಗೆ ಮೃತದೇಹ ಪರಿಶೀಲಿಸಲಾಗಿತ್ತು. ದೇಹದಲ್ಲಿ ಸಾಕಷ್ಟು ಗಾಯದ ಗುರುತುಗಳು ಕಂಡು ಬಂದಿದ್ದವು. ಹೀಗಾಗಿ ಬ್ರಹ್ಮಾವರ ಪೊಲೀಸರ ಮೇಲೆ ತುಂಬಾ ಅನುಮಾನವಿದೆ ಎಂದು ಯೋಹಾನ್ನನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News