ಮಕ್ಕಳ ದಿನಾಚರಣೆ: ಆರೋಗ್ಯವಂತ ಶಿಶು ಸಹಿತ ವಿವಿಧ ಸ್ಪರ್ಧೆ

Update: 2023-11-22 12:28 GMT

ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಬಾಲರೋಗ ವಿಭಾಗದಿಂದ ಹಿಮಾಲಯ ವೆಲ್‌ನೆಸ್ ಕಂಪನಿ, ಬೆಂಗಳೂರು ಇವರ ಆಶ್ರಯದಲ್ಲಿ ಮಕ್ಕಳ ದಿನನ್ನು ಇತ್ತೀಚೆಗೆ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್.ಬಾಲರೋಗ, ಹಿಮಾಲಯ ವೆಲ್‌ನೆಸ್ ಕಂಪನಿ, ಜೆನಿತ್ ವಿಭಾಗ ವಲಯ ವ್ಯವಸ್ಥಾಪಕ ನವೀನ್ ವರ್ಮಾ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಬಾಲರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕಾವ್ಯ ‘ಪೋಷಣೆಯ ಆಗರ-ಸಂತುಲಿತ ಆಹಾರ’ ಎಂಬ ವಿಷಯದ ಕುರಿತು ಮಾತನಾಡಿದರು.

ಆರೋಗ್ಯವಂತ ಶಿಶು ಸ್ಪರ್ಧೆಯ ಒಂದನೆಯ ವಿಭಾಗದಲ್ಲಿ ಸಾಧ್ವಿ ಪ್ರಥಮ, ಅನನ್ಯಾ ದ್ವಿತೀಯ, ಮುಹಮ್ಮದ್ ಜಿವಾನ್ ತೃತೀಯ ಹಾಗೂ ಎರಡನೆ ವಿಭಾಗದಲ್ಲಿ ವಿಧಾತ್ರಿ ಭಟ್ ಪ್ರಥಮ, ಸುಶಾನ್ ರಹೂಫ್ ದ್ವಿತೀಯ, ಝಯಾನ್ ತೃತೀಯ ಬಹುಮಾನವನ್ನು ಮತ್ತು ಮೂರನೆ ವಿಭಾಗದಲ್ಲಿ ಮೆಹರಾನ್ ಪ್ರಥಮ, ಐಶ್ವರ್ಯ ರಾಜ್ ದ್ವಿತೀಯ, ವಿನೀಶ ತೃತೀಯ ಬಹುಮಾನವನ್ನು ಪಡೆದರು.

ಛದ್ಮವೇಷ ಸ್ಪರ್ಧೆಯಲ್ಲಿ ಮುಹಮ್ಮದ್ ಹಿದಾಶ್ ಪ್ರಥಮ, ಮುಹಮ್ಮದ್ ಶೆಫ್ ದ್ವಿತೀಯ, ಭೂಮಿಕ ಭಾಂಡಾರಿ ತೃತೀಯ, ನಿಮ್ಮ ನೆಚ್ಚಿನ ಕಾರ್ಟೂನ್ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಅದಿತಿ ಪ್ರಥಮ, ಚಾರ್ವಿ ದ್ವಿತೀಯ, ವೇದಾಂತ್ ಎನ್.ಶೆಟ್ಟಿಗಾರ್ ತೃತೀಯ ಬಹುಮಾನ ಹಾಗೂ ಪಾವನಿ ಸಮಧಾನಕರ ಬಹುಮಾನವನ್ನು ಪಡೆದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಆಡಳಿತ ಮುಖ್ಯಾಧಿಕಾರಿ ಡಾ.ವೀರಕುಮಾರ ಕೆ., ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ರಜನೀಶ್ ವಿ.ಗಿರಿ ಉಪಸ್ಥಿತರಿದ್ದರು. ಬಾಲರೋಗ ವಿಭಾಗದ ಮುಖ್ಯಸ್ಥ ಡಾ.ಪೃಥ್ವಿರಾಜ್ ಪುರಾಣಿಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ಯರಾದ ಡಾ. ಪ್ರತಿಭಾ ಮಾಯಾಕರ ವಂದಿಸಿ, ಡಾ.ಪೂಜಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಹಪ್ರಾಧ್ಯಾಪಕಿ ಡಾ.ಸಹನಾ ಶಂಕರಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಸಹಪ್ರಾಧ್ಯಾಪಕಿ ಡಾ.ನಾಗರತ್ನ ಎಸ್.ಜೆ. ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ಚಿತ್ರಲೇಖಾ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News