ಅಂಬೇಡ್ಕರ್ ಅವಮಾನ: ಅಮಿತ್ ಶಾ ವಿರುದ್ಧ ಪ್ರತಿಭಟನೆ

Update: 2024-12-22 15:30 GMT

ಬ್ರಹ್ಮಾವರ, ಡಿ.22: ಲೋಕಸಭಾ ಕಲಾಪ ಸಂದರ್ಭದಲ್ಲಿ ಅಂಬೇಡ್ಕರ್‌ಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಿ, ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ರವಿವಾರ ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ ಮಾತನಾಡಿ, ಅಮಿತ್ ಶಾ ಅಂಬೇಡ್ಕರ್ ಅವರನ್ನು ಅಪಮಾನಿಸು ವುದರ ಮೂಲಕ ಭಾರತದ ಸಂವಿಧಾನವನ್ನೇ ವಿರೋಧಿಸುವ ಹೇಳಿಕೆ ನೀಡಿದ್ದಾರೆ. ಆ ಮೂಲಕ ದೇಶದಲ್ಲಿ ಅಶಾಂತಿಯನ್ನು ಉಂಟು ಮಾಡಿ ಕೋಮಗಲಭೆಗೆ ಕಾರಣೀಕರ್ತ ರಾಗುತ್ತಿದ್ದಾರೆ. ಇವರ ವಿರುದ್ಧ ಭಯೋತ್ಪಾದನೆ, ದೇಶದ್ರೋಹ ಕಾಯಿದೆ ಯಡಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು. ಭಾರತ ಸರಕಾರ ಅವರಿಗೆ ನೀಡಿರುವ ಭಾರತದ ಪೌರತ್ವ ವನ್ನೇ ರದ್ದು ಮಾಡಿ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಜಿಲ್ಲಾ ಕೋಶಾಧಿಕಾರಿ ಸತೀಶ್ ಜನ್ನಾಡಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಶಿರಿಯಾರ, ಮುಖಂಡರಾದ ಆನಂದ ಕೌಡೂರು, ಗಿರಿ ಮುದ್ದೂರು, ಸುಬ್ರಹ್ಮಣ್ಯ ಅರಸಮ್ಮಖಾನ್, ಸತೀಶ್ ಹೈಕಾಡಿ, ಹರೀಶ್ ಬೆಳ್ವೆ, ಪ್ರಮೋದಿನಿ ಹಂದಾಡಿ, ಸದಾಶಿವ ಮುದ್ಗೂರು, ಸಂತೋಷ್ ಹಿಲಿಯಾಣ, ಗೋವಿಂದ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News