ಕಾಪು: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
Update: 2024-12-22 13:32 GMT
ಕಾಪು, ಡಿ.22: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಉದ್ಯಾವರ ಎಂಬಲ್ಲಿ ನಡೆದಿದೆ.
ನ.9ರ ರಾತ್ರಿಯಿಂದ ಡಿ.20ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ಬೆಂಗಳೂರಿನ ಐಟಿ ಕಂಪೆನಿಯ ಉದ್ಯೋಗಿ ಸುಮಂತ್ ಎಂಬವರ ಮನೆಯ ಮಹಡಿಯ ಬಾಲ್ಕನಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಬೆಡ್ ರೂಮಿನ ಕಾಪಾಟಿನಲ್ಲಿದ್ದ 72.2 ಗ್ರಾಂ ತೂಕದ 2,88,000ರೂ. ಮೌಲ್ಯದ ಚಿನ್ನಾಭರಣ ಹಾಗೂ 330 ಗ್ರಾಂ ತೂಕದ 16,500ರೂ. ಮೌಲ್ಯದ ಬೆಳ್ಳಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಅದೇ ರೀತಿ ಎಲ್‌ಐಸಿ ಬಾಂಡ್ ಫೈಲ್‌ಗಳು ಹಾಗೂ ಜಾಗಕ್ಕೆ ಸಂಬಂದಪಟ್ಟ ಮೂಲ ದಾಖಲಾತಿಗಳು ಕಳವಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.