ಕೋಳಿ ಅಂಕಕ್ಕೆ ದಾಳಿ: ಆರು ಮಂದಿ ವಶಕ್ಕೆ

Update: 2024-12-22 13:53 GMT

ಬ್ರಹ್ಮಾವರ, ಡಿ.22: ಆರೂರು ಗ್ರಾಮದ ಬೆಳ್ಮಾರು ಎಂಬಲ್ಲಿ ಡಿ.21ರಂದು ಸಂಜೆ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ಧೀರಜ್, ಅವಿನಾಶ್, ವಿಲ್ಫ್ರೆಡ್ ಡಿಸೋಜ, ಪ್ರಸಾದ್, ಲಕ್ಷ್ಮಣ, ಹರೀಶ್ ಎಂದು ಗುರುತಿಸಲಾಗಿದೆ. ಇವರಿಂದ 4,200ರೂ. ನಗದು, 2 ಕೋಳಿಗಳು, 2 ಕೋಳಿ ಬಾಳ್, 6 ಮೊಬೈಲ್ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಳಿ ಅಂಕವನ್ನು ಸಂದೀಪ ಎಂಬಾತನು ನಡೆಸುತ್ತಿದ್ದು, ಇತರರು ಓಡಿಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News