ಜೆಟ್ ಸ್ಕೀ ಬೋಟ್ ಪಲ್ಟಿ: ಇನ್ನೂ ಪತ್ತೆಯಾಗದ ರೈಡರ್
Update: 2024-12-22 15:33 GMT
ಕುಂದಾಪುರ, ಡಿ.22: ತ್ರಾಸಿ ಕಡಲ ಕಿನಾರೆಯಲ್ಲಿ ಪ್ರವಾಸಿ ಜೆಟ್ ಸ್ಕೀ ಬೋಟ್ ಪಲ್ಟಿಯಾದ ಪರಿಣಾಮ ಸಮುದ್ರ ಪಾಲಾಗಿದ್ದ ಜೆಟ್ ಸ್ಕೀ ರೈಡರ್ ಮುರ್ಡೇಶ್ವರದ ರೋಹಿದಾಸ್ ಇನ್ನೂ ಪತ್ತೆಯಾಗಿಲ್ಲ.
ರವಿವಾರ ಕೂಡ ಸ್ಥಳೀಯ ಪೊಲೀಸರು, ಕರಾವಳಿ ಕಾವಲು ಪೊಲೀಸರು ಹಾಗೂ ಮುಳುಗು ತಜ್ಞರು ರೋಹಿದಾಸ್‌ಗಾಗಿ ಹುಡುಕಾಟ ಮುಂದುವರೆಸಿದ್ದು, ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.