ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಎಸ್ಪಿ ಕಾರ್ಯಕ್ಕೆ ದಸಂಸ ಬೆಂಬಲ

Update: 2023-09-27 13:49 GMT

ಉಡುಪಿ, ಸೆ.27: ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ.ಅರುಣ್ ಕುಮಾರ್ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಉದ್ದಗಲಕ್ಕೂ ಅಕ್ರಮ ಮರಳು ದಂಧೆ, ಅಕ್ರಮ ಕಲ್ಲು ಕೋರೆ, ಅಕ್ರಮ ಇಸ್ಪೀಟ್ ಕ್ಲಬ್‌ಗಳು ಕಾರ್ಯಾಚ ರಿಸುತ್ತಿದ್ದು, ಇದನ್ನು ರಾಜಕಾರಣಿಗಳ ಕ್ರಪಾಕಟಾಕ್ಷದಿಂದಲೇ, ಅವರ ಚೇಲಾಗಳೇ ನಡೆಸುತ್ತಿದ್ದರು. ನ್ಯಾಯಯುತವಾಗಿ ಸರಕಾರಕ್ಕೆ ಸಲ್ಲಬೇಕಾಗಿದ್ದ ಕೋಟ್ಯಂತರ ರೂಪಾಯಿ ರಾಜಧನವನ್ನು ಸರಕಾರಕ್ಕೆ ವಂಚಿಸಿ ಹಲವಾರು ಬಂಡವಾಳಶಾಹಿ ಕುಳಗಳು ಕೋಟ್ಯಂತರ ರೂಪಾಯಿ ಹಣವನ್ನು ಲಪಟಾಯಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಈ ಹೊಸ ಎಸ್ಪಿ ಉಡುಪಿಗೆ ವರ್ಗಾವಣೆಯಾಗಿ ಬಂದ ನಂತರ ಈ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಆದ್ದರಿಂದ ಈ ಬಂಡವಾಳ ಶಾಹಿ ಮುಷ್ಕರಕ್ಕೆ ಸೊಪ್ಪುಹಾಕದೆ ತಾವು ತಮ್ಮ ಪ್ರಾಮಾಣಿಕ ಕರ್ತವ್ಯವನ್ನು ಉಡುಪಿ ಜಿಲ್ಲೆಯಲ್ಲೂ ಮುಂದುವರಿಸಬೇಕು. ಬಂಡವಾಳಶಾಹಿಗಳ ಒತ್ತಡಕ್ಕೆ, ಬ್ಲಾಕ್ ಮೆಲ್ ತಂತ್ರಕ್ಕೆ, ರಾಜಕಾರಣಿಗ ಧಮ್ಕಿಗೆ ಮಣಿಯಬಾರದು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ ಬಾಳ್ಕುದ್ರು, ಅಣ್ಣಪ್ಪ ನಕ್ರೆ, ಶ್ಯಾಮಸುಂದರ ತೆಕ್ಕಟ್ಟೆ, ಶ್ರೀಧರ ಕುಂಜಿ ಬೆಟ್ಟು, ತಾಲೂಕು ಸಂಚಾಲಕ ಶಂಕರ್‌ದಾಸ್ ಚೆಂಡ್ಕಳ, ಶ್ರೀನಿವಾಸ ವಡ್ಡರ್ಸೆ, ನಾಗರಾಜ, ದೇವು ಹೆಬ್ರಿ, ವಿಠಲ ಉಚ್ಚಿಲ, ರಾಘವ ಕುಕುಜೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News