ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ: ಎಸ್.ವಿ.ಟಿ. ವನಿತಾ ಪಿಯು ಕಾಲೇಜು ತಂಡ ರನ್ನರ್ ಅಪ್
Update: 2024-10-01 10:26 GMT
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀಮದ್ ಭುವನೇಂದ್ರ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪಿಯುಸಿ ವಿಭಾಗದ ಬಾಲಕ - ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಎಸ್. ವಿ. ಟಿ. ವನಿತಾ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ತಂಡದ ಸವ್ಯಸಾಚಿ ಆಟಗಾರ್ತಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದೀಪಿಕಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಪಟುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರಭಾವತಿ ಹೆಗ್ಡೆ ಹಾಗೂ ಕೋಚ್ ಗಳಾದ ದಿನೇಶ್ ಹಾಗೂ ಕೀರ್ತನ್ ತರಬೇತಿ ನೀಡಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.