ಇಸ್ಪೀಟು ಜುಗಾರಿ: ಐವರ ಬಂಧನ

Update: 2023-09-12 16:12 GMT

ಗಂಗೊಳ್ಳಿ, ಸೆ.12: ತ್ರಾಸಿ ಗ್ರಾಮದ ಮೊವಾಡಿಯ ಸರ್ಕಾರಿ ಹಾಡಿಯಲ್ಲಿ ಸೆ.11ರಂದು ಸಂಜೆ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್, ಪ್ರದೀಪ, ವಿಲ್ಫ್ರೆಡ್, ಸಿದ್ದ, ಬಾಬು ಬಂಧಿತ ಆರೋಪಿಗಳು. ಇವರಿಂದ 65,800ರೂ. ನಗದು ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News