ಜಿಎಸ್‌ಟಿ ನೇಕಾರರನ್ನು ಕೂಲಿ ಕಾರ್ಮಿಕರನ್ನಾಗಿಸಿದೆ: ಸಂತೋಷ್ ಕೌಲಗಿ
ಉಡುಪಿ: ನೇಕಾರಿಕೆಯನ್ನು ಸರಕಾರವೇ ಕೊಂದು ಹಾಕಿದೆ. ಖಾವಿ ಬಟ್ಟೆೆಯ ಮೇಲೂ ಜಿಎಸ್‌ಟಿ ಹಾಕುವ ಮೂಲಕ ನೇಕಾರರನ್ನು ಕೂಲಿ ಕಾರ್ಮಿಕರ ಮಟ್ಟಕ್ಕೆೆ ಇಳಿಸಿದೆ. ನೇಕಾರರಿಗೆ ನೇಕಾರರೇ ಶತ್ರುಗಳಂತಾಗಿದ್ದಾರೆ. ಹೊಸತನಕ್ಕೆ ಇನ್ನೂ ತೆರೆದುಕೊಂಡಂತೆ ಅವರು ಕಾಣುತ್ತಿಲ್ಲ. ಗ್ರಾಹಕರು ಕೂಡ ಕಡಿಮೆ ಬೆಲೆ ನಿರೀಕ್ಷಿಸುತ್ತಾಾರೆ. ಸಮಾಜ ಕೆಟ್ಟಿರುವು ದರಿಂದ ವಾತಾವರಣವೂ ಹದಗೆಡುತ್ತಿದೆ ಎಂದು ಜನಪದ ಸೇವಾ ಟ್ರಸ್ಟ್‌ನ ಸಂತೋಷ್ ಕೌಲಗಿ ಹೇಳಿದ್ದಾರೆ.
ಕದಿಕೆ ಟ್ರಸ್ಟ್ ಮತ್ತು ಸೆಲ್ಕೊ ಇಂಡಿಯಾ ಸಹಯೋಗದಲ್ಲಿ ಗುರುವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ದ.ಕ. ಮತ್ತು ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಸಕ್ರಿಯ ನೇಕಾರರಿಗೆ ನೇಕಾರ ರತ್ನ ಪ್ರಶಸ್ತಿಯನ್ನು ಪ್ರದಾನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ದೇಶದಲ್ಲಿ ಮಹತ್ತರವಾದ ಬದಲಾವಣೆಗಳು ನಡೆದರೂ ನಾವು ಕೌಶಲಗಳನ್ನು ಯಂತ್ರಗಳಿಗೆ ಧಾರೆಯೆರೆದು ಕೊಟ್ಟಿದ್ದೇವೆ. ಈಗ ಕೃತಕ ಬುದ್ದಿಮತ್ತೆೆಯ ಅನುಷ್ಠಾನದಿಂದ ನಮಗೆ ನಮ್ಮಲ್ಲಿ ವಿಶ್ವಾಸ ಇಲ್ಲದಂತಾಗಿದೆ. ಆಧುನಿಕ ಶಿಕ್ಷಣ ವ್ಯವಸ್ಥೆೆ, ಶಾಲಾ-ಕಾಲೇಜುಗಳಲ್ಲಿ ಕೌಶಲ ಆಧಾರಿತ ಶಿಕ್ಷಣ ನೀಡುತ್ತಿಲ್ಲ. ಪರೋಪಕಾರಿಗಳಾಗಿ ಜೀವಿಸಲು ಕೌಶಲ್ಯ ಅತ್ಯಗತ್ಯ. ಅನ್ನ, ಅರಿವು, ಆಸರೆಗಳು ವಿವಿಧ ಕಂಪೆನಿಗಳ ಕೈಕೆಳಗೆ ಹೋದ ಪರಿಣಾಮ ನಾವು ಸೋಮಾರಿ ಗಳಾಗಿದ್ದೇವೆ. ಮುಖ್ಯವಾಗಿ ಸ್ವಶ್ರಮದ ಕೆಲಸಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದರು.
74 ವರ್ಷಗಳಿಂದ ನೇಕಾರಿಕೆ ವೃತ್ತಿ ಮಾಡುತ್ತಿರುವ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಸೋಮಪ್ಪ ಜತ್ತನ್ನ ಹಾಗೂ ೬೮ ವರ್ಷಗಳಿಂದ ನೇಕಾರಿಕೆ ವೃತ್ತಿ ನಡೆಸುತ್ತಿರುವ ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಂಜೀವ ಶೆಟ್ಟಿಗಾರ್ ಅವರಿಗೆ ನೇಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ರಾಜ್ಯಸಭಾ ಸದಸ್ಯ ಅನಿಲ್ ಪ್ರಸಾದ್ ಹೆಗ್ಡೆ, ಸೆಲ್ಕೊ ಇಂಡಿಯಾದ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ಮಾತನಾಡಿದರು. ಕದಿಕೆ ಟ್ರಸ್ಟ್‌ನ ಮಮತಾ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶು ಶೆಟ್ಟಿ ಹಾಗೂ ಪುರುಷೋತ್ತಮ ಅಡ್ವೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಟೈಟಸ್ ನರೋನ್ಹಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದುಷಿ ಪವನ ಬಿ.ಆಚಾರ್, ಶಶಿಕಲಾ ಎನ್.ಭಟ್, ಶಿಲ್ಪಾ ಜೋಶಿ ಹಾಗೂ ಪ್ರೀತಿ ಅವರಿಂದ ವೀಣಾ ವಾದನ ನಡೆಯಿತು.