ಸಕಲೇಶಪುರ ಬಳಿ ಗುಡ್ಡ ಕುಸಿತ: ಕಾರವಾರ-ಬೆಂಗಳೂರು ನಡುವೆ ಪುನರಾರಂಭಗೊಳ್ಳದ ರೈಲು ಸಂಚಾರ

Update: 2024-08-13 14:10 GMT

ಸಾಂದರ್ಭಿಕ ಚಿತ್ರ

ಉಡುಪಿ: ಮೈಸೂರು ವಿಭಾಗದ ನೈರುತ್ಯ ರೈಲ್ವೆ ಮಾರ್ಗದ ಸಕಲೇಶಪುರ ಬಾಳ್ಳುಪೇಟೆ ಬಳಿ ಕಳೆದ ವಾರ ಸಂಭವಿಸಿದ ಗುಡ್ಡ ಕುಸಿತದ ದುರಸ್ತಿ ಕಾರ್ಯ ಇನ್ನೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರವಾರ- ಮಂಗಳೂರು- ಬೆಂಗಳೂರು ನಡುವಿನ ರೈಲುಗಳ ಓಡಾಟ ಸಹ ಇನ್ನೂ ಪುನರಾರಂಭಗೊಂಡಿಲ್ಲ.

ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಕಾರವಾರ- ಬೆಂಗಳೂರು ನಡುವಿನ ರೈಲುಗಳ ಸಂಚಾರ ಇಂದು ಸಹ ರದ್ದು ಗೊಂಡಿದೆ. ಗುಡ್ಡದ ಮಣ್ಣು ರೈಲು ಹಳಿಗಳ ಮೇಲೆ ಮತ್ತೆ ಮತ್ತೆ ಬೀಳುತ್ತಿರುವುದರಿಂದ ದುರಸ್ತಿಕಾರ್ಯ ವಿಳಂಬವಾಗುತ್ತಿದೆ ಎಂದು ಕೊಂಕಣ ರೈಲ್ವೆ ಮೂಲಗಳು ತಿಳಿಸಿವೆ.

ಸಂಚಾರ ರದ್ದಾದ ರೈಲುಗಳಲ್ಲಿ ರೈಲು ನಂ.16595 ಕೆಎಸ್‌ಆರ್ ಬೆಂಗಳೂರು-ಕಾರವಾ ಎಕ್ಸ್‌ಪ್ರೆಸ್ ರೈಲು, ರೈಲು ನಂ.16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು, ರೈಲು ನಂ.16585 ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು, ರೈಲು ನಂ.16586 ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ.

ಇದರೊಂದಿಗೆ ರೈಲು ನಂ.16516 ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಇಂದಿನ ಸಂಚಾರ ಸಹ ಸಂಪೂರ್ಣ ರದ್ದಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News